ಇತರೆ

ಉಡುಪಿ: ಮೇಯಲು ಬಿಟ್ಟಿದ್ದ ದನಗಳ ಅಕ್ರಮ ಹಿಂಸಾತ್ಮಕ  ಸಾಗಾಟ, ಆರೋಪಿಗಳು ಅರೆಸ್ಟ್

Views: 39

ಕನ್ನಡ ಕರಾವಳಿ ಸುದ್ದಿ: ಮೇಯಲು ಬಿಟ್ಟಿದ್ದ ದನಗಳನ್ನು ಹಿಡಿದು ದುಷ್ಕರ್ಮಿಗಳು ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ಸಾಗಿಸಿದ ಘಟನೆಯೊಂದು ಕಾಪು ತಾಲೂಕಿನ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ನಡೆದಿದೆ.

ದನಗಳ ಮಾಲಕಿ ನೀಡಿದ ದೂರಿನ ಆಧಾರದಲ್ಲಿ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳತ್ತೂರು ನಿವಾಸಿ 64 ವರ್ಷ ಪ್ರಾಯದ ಉಮ್ಮರಬ್ಬ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಗಳಾದ 31 ವರ್ಷ ಪ್ರಾಯದ ಮೊಹಮ್ಮದ್ ಶರೀಫ್, 57 ವರ್ಷ ಪ್ರಾಯದ ಶಂಶುದ್ದೀನ್, 24 ವರ್ಷ ಪ್ರಾಯದ ಮಹಮ್ಮದ್ ಆಸೀರ್ ಎಂಬವರನ್ನೂ ಕಾಪುವಿನ ಕೊಪ್ಪಲಂಗಡಿ ಎಂಬಲ್ಲಿ ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು ಸಾಗಿಸುತ್ತಿದ್ದ ದನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ವಸಂತಿ ಸುನೀತಾ ಕ್ವಾಡ್ರಸ್ ಎಂಬುವರು ಮೇಯಲು ಬಿಟ್ಟಿದ್ದ ತಮ್ಮ 5 ದನಗಳ ಪೈಕಿ ಒಂದು ದನ ನಾಪತ್ತೆಯಾಗಿತ್ತು. ಹುಡುಕಾಟ ನಡೆಸಿದಾಗ ಅಲ್ಲೇ ಒಂದು ವಾಹನ ಕಂಡುಬಂದಿದೆ. ಅದರಲ್ಲಿ ಕಾಣೆಯಾದ ತಮ್ಮ ದನ ಇದ್ದು, ಅದರ ಜೊತೆ ಇನ್ನೊಂದು ದನವನ್ನು ಕೂಡಾ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿದ್ದು ಕಂಡುಬಂದಿದೆ.

ವಾಹನದ ಸಮೀಪ ದೂರುದಾರೆ ಮಹಿಳೆಯ ಪರಿಚಯಸ್ಥರಾದ ಉಮ್ಮರಬ್ಬ ಮತ್ತು ಇತರ ಮೂರು ಜನರು ಇರುವುದು ಕಂಡುಬಂದಿದ್ದು, ಮಹಿಳೆಯನ್ನು ಕಂಡ ಕೂಡಲೇ ಅವರು ಟೆಂಪೋವನ್ನು ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದಾರೆ.

ಇದೀಗ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕರಾದ ಇಶಿತಾ ಗುಪ್ತ ಹಾಗೂ ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಅಝಮತ್ ಆಲಿ ರವರ ನೇತೃತ್ವದಲ್ಲಿ ಪೊಲೀಸರ ತಂಡವು ಪತ್ತೆ ಕಾರ್ಯಾಚರಣೆ ನಡೆಸಿತ್ತು.

Related Articles

Back to top button
error: Content is protected !!