ಯುವಜನ

ಅಶ್ಲೀಲ ಚಿತ್ರ ವೈರಲ್ ಮಾಡುವುದಾಗಿ ಯುವತಿಗೆ ಬೆದರಿಕೆಯೊಡ್ಡಿ ಚಿನ್ನಾಭರಣ ಎಗರಿಸಿದ ಯುವಕ!

Views: 13

ಕನ್ನಡ ಕರಾವಳಿ ಸುದ್ದಿ:  ಯುವತಿಯೋರ್ವಳಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ಬಳಿಕ ಅಶ್ಲೀಲ ಚಿತ್ರಗಳನ್ನು ವೈರಲ್ ಮಾಡುತ್ತೇನೆಂದು ಹೆದರಿಸಿ, ಸುಮಾರು 10 ಪವನ್ ಚಿನ್ನಾಭರಣ ಎಗರಿಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ -ಪ್ರಕರಣ ದಾಖಲಾಗಿದೆ.

ಸುಪ್ರೀತ್ ಗೌಡ ಯಾನೆ ಲತೀಶ್ ಗೌಡ ಎಂಬಾತ ಕೆಲವು ಸಮಯಗಳ ಹಿಂದೆ ಪರಿಚಿತನಾಗಿ ಮೆಸೆಜ್ ಮೂಲಕ ಯುವತಿಯ ಮೊಬೈಲ್ ಸಂಖ್ಯೆ ಪಡೆದಿದ್ದ ಬಳಿಕ ಅಶ್ಲೀಲ ಚಿತ್ರವನ್ನು ಪಡೆದ ಯುವಕ ಯುವತಿಯ ಬಳಿಯಲ್ಲಿರುವ ಚಿನ್ನಾಭರಣ ನೀಡುವಂತೆ ಬೇಡಿಕೆ ಇಟ್ಟು ನೀಡದೇ ಇದ್ದರೆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಹೆದರಿಸಿದ್ದಾನೆ.

ಆರೋಪಿ ಸ್ನೇಹಿತನೊಬ್ಬನನ್ನು ಯುವತಿ ಹಾಕಿದ ಲೊಕೇಶನ್ ಗೆ ಕಳುಹಿಸಿ ಚಿನ್ನಾಭರಣವನ್ನು ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಮತ್ತೆ ಮತ್ತೆ ಚಿನ್ನ ಕೇಳಿದಾಗ ಯುವತಿ ಘಟನೆಯನ್ನು ಮನೆಯವರಿಗೆ ಹೇಳಿದ್ದು, ಅವರು ಆತನನ್ನು ಸಂಪರ್ಕಿಸಿದಾಗ ಎಲ್ಲವನ್ನೂ ಹಿಂದಿರುಗಿಸುವುದಾಗಿ ಹೇಳಿದ್ದರೂ ಚಿನ್ನ ಹಿಂದಿರುಗಿಸದೆ ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

Related Articles

Back to top button
error: Content is protected !!