ಜನಮನ

ಗ್ಯಾಸ್‌ ಸಮಸ್ಯೆಗೆ ಸಿಗುವುದೇ ಶೀಘ್ರ ಪರಿಹಾರ?

Views: 28

ಕನ್ನಡ ಕರಾವಳಿ ಸುದ್ದಿ: ಹರ್ಮೂಜ್ ಜಲಸಂಧಿ ದಾಟಲು ಭಾರತದ ಹಡಗುಗಳಿಗೆ ಇರಾನ್ ಒಪ್ಪಿದ ಬಳಿಕ ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಬಗೆಹರಿಯುವ ಆಶಾಕಿರಣದ ಹೊರತಾ ಗಿಯೂ ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಪರಿಸ್ಥಿಗಿ ಬಿಗಡಾಯಿಸಿದೆ.

ಕಳೆದ ನಾಲೈದು ದಿನಗಳಿಂದ ಎದುರಾಗಿರುವ ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ಭಾನುವಾರ ಮತ್ತಷ್ಟು ಹೆಚ್ಚಾಗಿದ್ದು, ಬಹುತೇಕ ಹೋಟೆಲ್‌ಗಳು ಮೆನುವಿಗೆ ಕತ್ತರಿ ಪ್ರಯೋಗ ಮಾಡಿದೆ. ಈ ನಡುವೆ ಆಹಾರ ಸಚಿವ ಮುನಿಯಪ್ಪ ಅವರು, ಶೀಘ್ರದಲ್ಲಿಯೇ ಈ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುವ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಎರಡು ಕಾರ್ಗೋ ಹಡಗುಗಳು ಬಂದಿರುವುದರಿಂದ ಅನುಕೂಲವಾಗುತ್ತದೆ ಎನ್ನುವ ವಿಶ್ವಾಸದಲ್ಲಿರುವ ಸಚಿವರು, ಪೂರ್ತಿ ಪ್ರಮಾಣದಲ್ಲಿ ಸರಿ ಹೋಗುವವರೆಗೂ ಎಚ್ಚರಿಕೆಯಿಂದ ಬಳಸಬೇಕು.

ಸ್ವಲ್ಪ ಮಟ್ಟಿಗೆ ಹೋಟೆಲ್‌ಗಳಿಗೆ ಕೂಡ ಎಲ್‌ ಪಿಜಿ ನೀಡಲು ಸೋಮವಾರ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಈಗಾಗಲೇ ವಾಣಿಜ್ಯ ಎಲ್‌ಪಿಜಿ ಸರಬರಾಜು ಕೊರತೆ ಹಿನ್ನೆಲೆ ಬೆಂಗಳೂರಲ್ಲಿ ಅನೇಕ ಹೋಟೆಲ್‌ಗಳು ಮುಚ್ಚಿವೆ. ಇನ್ನೂ ಹಲವು ಹೋಟೆಲ್‌ಗಳು ತಮ್ಮ ಮೆನುವಲ್ಲಿ ಬದಲಾವಣೆ ಮಾಡಿದ್ದು, ಇಂಡಕ್ಷನ್ ಹಾಗೂ ಕಟ್ಟಿಗೆ ಮೂಲಕ ಅಡುಗೆ ಕೆಲಸಗಳನ್ನು ಮಾಡುತ್ತಿದ್ದಾರೆ. ಇನ್ನು ಒಂದು ವಾರದಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಲ್ಲಿರುವ ಹೋಟೆಲ್ ಮಾಲೀಕರು, ಸದ್ಯ ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಎರಡು ಮೂರು ದಿನಗಳಲ್ಲಿ 2-3 ಕಾರ್ಗೋ ಶಿಪ್‌ ಗಳು ಬಂದರಿಗೆ ಬರಲಿವೆ. ಈ ಹಡಗುಗಳು ಬಂದರೆ ಸಮಸ್ಯೆ ತಗ್ಗಲಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಮಾತನಾಡಿ, ನಗರದಲ್ಲಿ 40 ಸಾವಿರಕ್ಕೂ ಅಧಿಕ ಹೋಟೆಲ್‌ಗಳಿವೆ ಇದರಲ್ಲಿ 25ಕ್ಕೂ ಹೆಚ್ಚು ಹೋಟೆಲ್‌ಗಳು ಬಂದ್ ಆಗಿವೆ. ಇನ್ನು 200ಕ್ಕೂ ಅಧಿಕ ಹೋಟೆಲ್‌ಗಳ `ಸಿಬ್ಬಂದಿಗೆ ಕೆಲಸವಿಲ್ಲದಂತಾಗಿದೆ. ಕೆಲಸವಿಲ್ಲದೆ ಸಿಬ್ಬಂದಿ ಖಾಲಿ ಕುಳಿತುಕೊಳ್ಳುವಂತಾಗಿದೆ. ಈಗಾಗಲೇ ಈಗಾಗಲೇ ಐದು ದಿನಗಳಿಂದ 100 ಕೋಟಿ ನಷ್ಟವಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಉದ್ಯಮಕ್ಕೆ ಭಾರಿ ಪೆಟ್ಟು ಬೀಳಲಿದೆ. ಈ ಹಿನ್ನೆಲೆ ಶೇ.20-25ರಷ್ಟು ತೆರಿಗೆ ವಿನಾಯತಿ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ.

Related Articles

Back to top button
error: Content is protected !!