ಇತರೆ

ಬೈಕ್ ಹೊಗೆಯಿಂದ ಅವಳಿ ಮಕ್ಕಳು, ಒಬ್ಬ ಸಹೋದರ ಹಾಗೂ ಅಜ್ಜ ಸಾವು

Views: 61

ಕನ್ನಡ ಕರಾವಳಿ ಸುದ್ದಿ: ಅಜ್ಜ ಹಾಗೂ ಮೂವರು ಮಕ್ಕಳು ಮರಣ , ಬೈಕ್ ಎಂಜಿನ್ ಇಡೀ ರಾತ್ರಿ ಆನ್ ಇಟ್ಟಿದ್ದರಿಂದ ಘಟನೆ ಸಂಭವಿಸಿದೆ. ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಂಗನೂರು ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದೆ.

ಆಂಧ್ರ ಪ್ರದೇಶದಲ್ಲಿ ದುರಂತ ಸಂಭವಿಸಿದ್ದು, ಮನೆಯೊಳಗೆ ಬೈಕ್ ಎಂಜಿನ್‌ನಿಂದ ಹೊರಬಂದ ವಿಷಕಾರಿ ಹೊಗೆ ಅಜ್ಜ ಹಾಗೂ ಮೂವರು ಮೊಮ್ಮಕ್ಕಳು ನಿದ್ರೆಯಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಂಗನೂರು ಪ್ರದೇಶದಲ್ಲಿ ನಡೆದಿದೆ.

ಮುರಳಿ ಎಂಬಾತ ತನ್ನ ಬೈಕ್ ಅನ್ನು ರಿಪೇರಿ ಮಾಡಿಸಿಕೊಂಡಿದ್ದ. ಮೆಕಾನಿಕ್ ಸಲಹೆ ಮೇರೆಗೆ ಬೈಕ್ ಎಂಜಿನ್ ಅನ್ನು ಇಡೀ ರಾತ್ರಿ ಆನ್‌ನಲ್ಲೇ ಬಿಟ್ಟಿದ್ದಾನೆ. ಮನೆಯ ಬಾಗಿಲು-ಕಿಟಕಿಗಳು ಮುಚ್ಚಿದ್ದರಿಂದ ಹೊಗೆ ಮನೆಯೊಳಗೆ ತುಂಬಿಕೊಂಡಿದೆ.

ಮನೆಯೊಳಗಿನ ಕೋಣೆಯಲ್ಲಿ ನಿದ್ರಿಸುತ್ತಿದ್ದ ವಯಸ್ಸಾದ ರಾಮಚಂದ್ರಯ್ಯ (70), ಮೊಮ್ಮಗ ಕಾರ್ತಿಕ್ (15) ಹಾಗೂ ಅವಳಿ ಮಕ್ಕಳಾದ ಚರಿತಾ (8) ಮತ್ತು ಚಂದನಾ (8) ದೇಹದೊಳಗೆ ವಿಷಕಾರಿ ಕಾರ್ಬನ್ ಮೋನಾಕ್ಸೈಡ್ ಅನಿಲ ಸೇರಿ ಮೃತಪಟ್ಟಿದ್ದಾರೆ. ಮುರಳಿ ಹಾಗೂ ಅವರ ಪತ್ನಿ ಮನೆಯ ಮೇಲ್ಛಾವಣಿಯಲ್ಲಿ ಮಲಗಿದ್ದ ಕಾರಣ ಅವರು ಅಪಾಯದಿಂದ ಪಾರಾಗಿದ್ದಾರೆ.

ಬೆಳಗ್ಗೆ ಮನೆ ಬಾಗಿಲು ತೆರೆಯದಿರುವುದನ್ನು ಗಮನಿಸಿ ಒಳಗೆ ಹೋಗಿ ನೋಡಿದಾಗ ನಾಲ್ವರು ಮೃತದೇಹಗಳು ಕಂಡುಬಂದವು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!