ಇತರೆ
ಕುಂದಾಪುರ: ನಿವೃತ್ತ ಸಹಾಯಕ ಪೋಲಿಸ್ ಉಪನಿರೀಕ್ಷಕ ವಿಶ್ವನಾಥ ಶೆಟ್ಟಿ ನಿಧನ
Views: 51
ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಕೋಣಿ ನಿವಾಸಿ ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ವಿಶ್ವನಾಥ ಶೆಟ್ಟಿ (76) ಹೃದಯಾಘಾತದಿಂದ ಸೆಪ್ಟೆಂಬರ್ 30ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರ ಪತ್ನಿ, ಇಬ್ಬರ ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ವಿಶ್ವನಾಥ ಶೆಟ್ಟಿ ಅವರು ಕುಂದಾಪುರ ಪೊಲೀಸ್ ಲೈನ್ ರಕ್ತೇಶ್ವರಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದರು. ಸುಮಾರು 40 ವರ್ಷಗಳಿಂದ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದರು. ಮತ್ತು ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದರು
ಮೃತರ ಪಾರ್ಥಿವ ಶರೀರವನ್ನು ಅಕ್ಟೋಬರ್ 1ರ ಬೆಳಿಗ್ಗೆ 11:30ವರೆಗೆ ಕುಂದಾಪುರದ ಕೋಣಿ ಸ್ವಗೃಹದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ತದನಂತರ ಅವರ ಹುಟ್ಟೂರಾದ ಕಾವ್ರಾಡಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲ ತಿಳಿಸಿದೆ.






