ಇತರೆ

ಹೆಂಗವಳ್ಳಿಯಲ್ಲಿ ಮಳೆನೀರು ಕೊಯ್ಲು, ತ್ಯಾಜ್ಯ ನಿರ್ವಹಣೆ,  ನವೀಕರಿಸಬಹುದಾದ ಇಂಧನ ಕುರಿತು ಜಾಗೃತಿ

Views: 17

ಕನ್ನಡ ಕರಾವಳಿ ಸುದ್ದಿ: ಭಾರತೀಯ ವಿಕಾಸ ಟ್ರಸ್ಟ್‌ , ಮಣಿಪಾಲ ಹಾಗೂ ಬೆಂಗಳೂರಿನ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಗ್ರಾಮ ಪಂಚಾಯತ್ ಹೆಂಗವಳ್ಳಿ, ಸಂಜೀವಿನಿ ಒಕ್ಕೂಟ 50ನೇ ಹೆಂಗವಳ್ಳಿ ಸಹಯೋಗದಲ್ಲಿ ಮಳೆನೀರು ಕೊಯ್ಲು, ತ್ಯಾಜ್ಯ ನಿರ್ವಹಣೆ ಹಾಗೂ ನವೀಕರಿಸಬಹುದಾದ ಇಂಧನ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹೆಂಗವಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು. 

ಕಾರ್ಯಕ್ರಮವನ್ನು ಹೆಂಗವಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧುಸೂದನ್ ಅವರು ಗಿಡಕ್ಕೆ ನೀರೂಣಿಸುವ ಮೂಲಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಶುಭ ಹಾರೈಸಿದರು. 

ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮೀ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಂಗವಳ್ಳಿ ಗ್ರಾಮ ಪಂಚಾಯತಿನ ಕಾರ್ಯದರ್ಶಿ ನಾರಾಯಣ, ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೊ, ಭಾರತೀಯ ವಿಕಾಸ ಟ್ರಸ್ಟಿನ ರಾಘವೇಂದ್ರ ಆಚಾರ್ಯ ಕೆದೂರು, ಸಂಜೀವಿನಿ ಒಕ್ಕೂಟದ ಎಂಬಿಕೆ ಅರ್ಪಿತಾ ಹಾಗೂ ಎಲ್ ಸಿ ಆರ್ ಟಿ ಕೃಷಿ ಸಖಿ ಪಶುಸಖಿ ಉಪಸ್ಥಿತರಿದ್ದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೊ ಅವರು ಮಳೆನೀರು ಕೊಯ್ಲು ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಭಾರತೀಯ ವಿಕಾಸ ಟ್ರಸ್ಟಿನ ಕಾರ್ಯಕ್ರಮ ರಾಘವೇಂದ್ರ ಆಚಾರ್ಯ ಅವರು ನವೀಕರಿಸಬಹುದಾದ ಇಂಧನದ ಬಳಕೆ, ಅದರ ಪ್ರಯೋಜನಗಳು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಅದರ ಪಾತ್ರದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಒಟ್ಟು 71 ಮಂದಿ ಸ್ವಸಹಾಯ ಸಂಘಗಳ ಮಹಿಳೆಯರು ಭಾಗವಹಿಸಿ, ಮಳೆನೀರು ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಹಾಗೂ ನವೀಕರಿಸಬಹುದಾದ ಇಂಧನದ ಕುರಿತು ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.

ಸಂಜೀವಿನಿ ಒಕ್ಕೂಟದ ಎಂಬಿಕೆ ಅರ್ಪಿತಾ ಆರ್ ಪಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Related Articles

Back to top button
error: Content is protected !!