ಸಾಂಸ್ಕೃತಿಕ

ಖ್ಯಾತ ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

Views: 26

ಕನ್ನಡ ಕರಾವಳಿ ಸುದ್ದಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಖ್ಯಾತ ನಟಿ ಸಾಹುಕಾರ್ ಜಾನಕಿ(95) 21 ಆಗಸ್ಟ್ 2026ರ ‘ವರಮಹಾಲಕ್ಷ್ಮೀ’ ಹಬ್ಬದ ದಿನವೇ ನಿಧನರಾದರು.ಇತ್ತೀಚೆಗೆ  ವಯೋಸಹಜ ಖಾಯಿಲೆಯಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.

1950 ರಲ್ಲಿ ನಂದಮೂರಿ ತಾರಕ್ ರಾಮರಾವ್ ಜೊತೆ ‘ಸಾಹುಕಾರ್’ ಸಿನಿಮಾದಲ್ಲಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದ ಕಾರಣಕ್ಕೆ ಮುಂದೆ ಈ ನಟಿಗೆ ‘ಸಾಹುಕಾರ್’ ಜಾನಕಿ ಎಂದೇ ಹೆಸರಾಗಿದೆ. ತಮಿಳು, ತೆಲುಗು ಹಾಗೂ ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ಸಾಹುಕಾರ್ ಜಾನಕಿ ನಟಿಸಿದ್ದಾರೆ. ಕನ್ನಡದಲ್ಲಿ ಶಬ್ದವೇದಿ, ಅಭಿ, ಒಂದೇ ಗುರಿ, ಗೀತಾ, ಕುಲಪುತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ‌ ನಟನೆ ಮಾಡಿದ್ದಾರೆ.

70 ದಶಕಗಳಲ್ಲಿ ಸರಿಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದ ನಟಿ ಜಾನಕಿಯವರು. ಅಂದಿನ ಹೆಚ್ಚುಕಡಿಮೆ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಸಾಹುಕಾರ್ ಜಾನಕಿಯವರು ನಟಿಸಿದ್ದಾರೆ. ಈ ಕಾರಣದಿಂದಲೇ ಅವರಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಜಾನಕಿ ಅವರ ಕಲಾಸೇವೆಗೆ ಅವರಿಗೆ ‘ಪದ್ಮಶ್ರೀ’ ಸೇರಿದಂತೆ ಹಲವು ಪ್ರಶಸ್ತಿ ಲಭಿಸಿವೆ.

Related Articles

Back to top button
error: Content is protected !!