ಇತರೆ

ಶಾಲೆಯ ಮುಖ್ಯ ಶಿಕ್ಷಕಿ ವನಿತಾ ಶೆಟ್ಟಿಗಾರ್ ದಿಢೀರ್ ಹೃದಯಾಘಾತದಿಂದ ಸಾವು

Views: 23

ಕನ್ನಡ ಕರಾವಳಿ ಸುದ್ದಿ:ಗುರುಪುರ ಕೈಕಂಬದ ಕಂದಾವರ ಬೈಲು ದಿ.ಸುಬ್ರಾಯ ಶೆಟ್ಟಿಗಾರ್‌ ಅವರ ಪತ್ನಿ ಕೆಲಿಂಜ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವನಿತಾ ಶೆಟ್ಟಿಗಾರ್(58) ಅವರು ಹೃದಯಾಘಾತದಿಂದ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಯಲ್ಲಿ ನ.2ರಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅವರು ಮಂಗಳೂರಿನ ಜ್ಯೋತಿನಗರ, ಮೂಡಬಿದಿರೆ,ಕೊಳವೂರು, ವೇಣೂರು ಪಡಂತಡ್ಕ ಹಾಗೂ ಕುಪ್ಪೆಪದವು ಶಾಲೆಯಲ್ಲಿ ಶಿಕ್ಷಕಿಯಾಗಿ ಅಲ್ಲಿಂದ ಎರ್ಮಾಳ್‌ ಪದವು ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ವರ್ಗಾವಣೆಗೊಂಡಿದ್ದ ಇವರು ಕಳೆದ ಒಂದು ವರ್ಷಗಳಿಂದ ಕೆಲಿಂಜ ಶಾಲೆಗೆ ವರ್ಗಾವಣೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಒಟ್ಟು 34 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.

ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದ ಶಿಕ್ಷಕಿ ವನಿತಾ ಅವರು ರಾತ್ರಿ ದಿಢೀರ್ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಿಸಲಿಲ್ಲ. ಶಾಲೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ವಹಿಸಿದ್ದ ಅವರು ನ.7ರಂದು ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಂಡಿದ್ದರು.

Related Articles

Back to top button
error: Content is protected !!