ಜನಮನ

ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ನವ ದಂಪತಿಗೆ ಹಾಲು- ಮೊಸರು ಉಡುಗೊರೆ!

Views: 8

ಕನ್ನಡ ಕರಾವಳಿ ಸುದ್ದಿ: ಹಾಲಿನ ದರ ಏರಿಕೆ ವಿರುದ್ಧ ಮದುವೆ ಸಂಭ್ರಮದಲ್ಲೇ ವಿನೂತನ ಪ್ರತಿಭಟನೆ ಹಾಗೂ ಜಾಗೃತಿ ಅಭಿಯಾನ ನಡೆದಿದೆ. ಮೈಸೂರು ತಾಲೂಕಿನ ಕಡಕೋಳದ ಕಾಳಿಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಡಕೋಳ ನಿವಾಸಿ ಮಂಜು ಮತ್ತು ಅನನ್ಯ ಅವರ ವಿವಾಹ ಸಮಾರಂಭದಲ್ಲಿ, ನವದಂಪತಿಗೆ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಚಿನ್ನ-ಬೆಳ್ಳಿಯ ಬದಲು ಹಾಲು ಮತ್ತು ಮೊಸರನ್ನು ಉಡುಗೊರೆಯಾಗಿ ನೀಡಲಾಗಿದೆ.

ಹಾಲಿನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಉಂಟಾಗಿರುವ ಆರ್ಥಿಕ ಹೊರೆಯನ್ನು ಖಂಡಿಸಿ, ಮದುವೆ ಮನೆಯಲ್ಲಿ ಈ ಉಡುಗೊರೆ ನೀಡುವ ಮೂಲಕ ಮೈಸೂರಿಗರು ಸರ್ಕಾರಕ್ಕೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದ್ದಾರೆ. ಬಡವರು ಹಾಗೂ ಮಧ್ಯಮ ವರ್ಗದವರ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ದರ ನಿಯಂತ್ರಿಸಬೇಕೆಂದು ಪ್ರಜ್ಞಾವಂತ ನಾಗರಿಕ ವೇದಿಕೆ ಆಗ್ರಹಿಸಿದೆ.

Related Articles

Back to top button
error: Content is protected !!