ಇತರೆ

ಮೂವರು ಯುವತಿಯರು ಪ್ರಿಯಕರರೊಂದಿಗೆ ಓಡಿಹೋಗಿ ಮದುವೆ

Views: 27

ಕನ್ನಡ ಕರಾವಳಿ ಸುದ್ದಿ: ಒಂದೇ ಜಿಲ್ಲೆಯ ಮೂವರು ಯುವತಿಯರು ಪ್ರಿಯಕರರೊಂದಿಗೆ ಓಡಿಹೋಗಿ ಮದುವೆ ಪೋಷಕರು ನಮಗೆ ತೊಂದರೆ ಕೊಡಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ರಿಲೀಸ್ ಮಾಡಿದ್ದಾರೆ.

ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಯುವತಿಯರು ಸರಣಿಯಾಗಿ ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿರುವ ಘಟನೆಗಳು ಇಡೀ ರಾಜ್ಯದಲ್ಲೇ ತೀವ್ರ ಸಾಮಾಜಿಕ ಚರ್ಚೆಗೆ ಗ್ರಾಸವಾಗಿವೆ. ಒಂದೇ ಜಿಲ್ಲೆಯ ಮೂರು ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯರು ತಮ್ಮ ಪ್ರಿಯಕರರೊಂದಿಗೆ ತೆರಳಿ, ಸ್ವಇಚ್ಛೆಯಿಂದ ಮದುವೆಯಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.

ಬರಿಯಾರ್‌ಪುರ ವಿಜಯನಗರದ ಪ್ರೀತಿ ಕುಮಾರಿ, ನಗರ ಠಾಣಾ ವ್ಯಾಪ್ತಿಯ ಶಿವಾನಿ ಕುಮಾರಿ ಮತ್ತು ಹೇಮರಾಜ್‌ಪುರದ ಮಧು ಕುಮಾರಿ ಎಂಬುವವರೇ ಈ ರೀತಿ ವೀಡಿಯೋ ಸಂದೇಶ ಬಿಡುಗಡೆ ಮಾಡಿದ ಯುವತಿಯರು. ಯಾರ ಒತ್ತಡವೂ ಇಲ್ಲದೆ ತಮ್ಮ ಸ್ವಂತ ಇಷ್ಟದ ಮೇರೆಗೆ ಈ ವಿವಾಹವಾಗಿದ್ದು, ಪೋಷಕರು ತಮ್ಮನ್ನು ಹುಡುಕಿಕೊಂಡು ಅಲೆಯಬಾರದು ಹಾಗೂ ಪತಿ ಅಥವಾ ಅತ್ತೆ-ಮಾವಂದಿರ ವಿರುದ್ಧ ಸುಳ್ಳು ದೂರು ದಾಖಲಿಸಬಾರದು ಎಂದು ವೀಡಿಯೋದಲ್ಲಿ ಮನವಿ ಮಾಡಿದ್ದಾರೆ.

ಒಂದೇ ಜಿಲ್ಲೆಯಲ್ಲಿ ನಡೆದ ಈ ಸರಣಿ ಪ್ರೇಮ ವೈವಾಹಿಕ ಬೆಳವಣಿಗೆಗಳು ಸ್ಥಳೀಯ ಪೋಷಕರು ಮತ್ತು ಸಮಾಜದ ಮುಖಂಡರಲ್ಲಿ ತೀವ್ರ ಆತಂಕ ಮೂಡಿಸಿವೆ. ಕ್ಷಣಿಕ ಆವೇಶ ಹಾಗೂ ಭಾವನಾತ್ಮಕತೆಯಿಂದ ಕೈಗೊಳ್ಳುವ ಇಂತಹ ನಿರ್ಧಾರಗಳು ಯುವಜನತೆಯ ಭವಿಷ್ಯ, ಭದ್ರತೆ ಮತ್ತು ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಹಿರಿಯರು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವಿವಾಹವಾದ ಯುವತಿಯರು ಕಾನೂನುಬದ್ಧವಾಗಿ ವಯಸ್ಕರೇ (ಮೇಜರ್) ಅಥವಾ ಅಪ್ರಾಪ್ತರೇ, ಮತ್ತು ಈ ಮದುವೆಗಳು ನಿಜವಾಗಿಯೂ ಸ್ವಇಚ್ಛೆಯಿಂದ ನಡೆದಿವೆಯೇ ಎಂಬ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಯುವತಿಯರು ಅಪ್ರಾಪ್ತರಾಗಿದ್ದರೆ ಇದು ಗಂಭೀರ ಅಪರಾಧವಾಗುವುದರಿಂದ ವಯಸ್ಸಿನ ಮತಿಯನ್ನು ಕಡ್ಡಾಯವಾಗಿ ಪರಿಶೀಲಿಸಲಾಗುತ್ತಿದೆ.

 

Related Articles

Back to top button
error: Content is protected !!