ಇತರೆ

ಅಶ್ಲೀಲ ಸಂದೇಶ ಕಳುಹಿಸಿದ ಉಪನ್ಯಾಸಕನಿಗೆ ಧರ್ಮದೇಟು ನೀಡಿದ ವಿದ್ಯಾರ್ಥಿನಿಯರು! 

Views: 33

ಕನ್ನಡ ಕರಾವಳಿ ಸುದ್ದಿ:  ಅಶ್ಲೀಲ ಸಂದೇಶ ಕಳುಹಿಸಿದ ಉಪನ್ಯಾಸಕನಿಗೆ ಪ್ರಾಂಶುಪಾಲರ ಚೇಂಬರ್‌ನಲ್ಲೇ ವಿದ್ಯಾರ್ಥಿನಿಯರು ಥಳಿಸಿದ ಘಟನೆ ನಾಗಮಂಗಲ ಪಟ್ಟಣದ ಹೊರವಲಯದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿನಿಯರನ್ನು ಸಮಾಧಾನಪಡಿಸಿದ್ದಾರೆ.

ಥಳಿತಕ್ಕೊಳಗಾದ ಸಂದರ್ಭದಲ್ಲಿ ಉಪನ್ಯಾಸಕ ವಿದ್ಯಾರ್ಥಿನಿಯರಿಗೆ ಕೈಮುಗಿದು, ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾನೆ ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಪನ್ಯಾಸಕ ಗಂಗೂ ಕಿರುಕುಳ ನೀಡುತ್ತಿದ್ದ ಆರೋಪಿ. ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಪಡೆದು ಚಾಟಿಂಗ್ ಮಾಡುತ್ತಿದ್ದರು. ಐ ಲವ್ ಯೂ, ಐ ಲೈಕ್ ಯೂ, ಐ ಲವ್ ಯೂ ಚಿನ್ನು ಎಂದೆಲ್ಲಾ ಉಪನ್ಯಾಸಕ ಮೆಸೇಜ್ ಮಾಡಿದ್ದಾರೆ. ಇತ್ತ ಉಪನ್ಯಾಸಕನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ರೊಚ್ಚಿಗೆದ್ದು, ಕಾಲೇಜಿನಲ್ಲಿಯೇ ಧರ್ಮದೇಟು ನೀಡಿದ್ದಾರೆ.

ಈ ವೇಳೆ ಅವರು ಕೈ ಮುಗಿದು ಕೇಳಿಕೊಂಡರು ಬಿಟ್ಟಿಲ್ಲ. ಇನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ಉಪನ್ಯಾಸಕ ಮಾಸ್ಕ್ ಹಾಕಿಕೊಂಡರು. ಈ ವೇಳೆ ‘ಮಾಡುವುದೆಲ್ಲಾ ಮಾಡಿ ಮಾಸ್ಕ್ ಹಾಕಿದ್ದೀಯಾ’ ಎಂದು ವಿದ್ಯಾರ್ಥಿನಿಯರು ಗದರಿದ್ದಾರೆ. ಘಟನೆಯಿಂದ ಬೆದರಿದ ಗಂಗೂ ಬೀರು ಸಂದಿಯಲ್ಲಿ ಅವಿತುಕೊಂಡಿದ್ದಾರೆ. ಆದರೂ ಬಿಟ್ಟಿಲ್ಲ. ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ವೇಳೆ ಗಂಗೂ ಆಫೀಸ್ ರೂಮ್ ಗೋಡೆ, ಕಬ್ಬಿಣದ ಕಪಾಟಿಗೆ ತಲೆ ಜಜ್ಜಿಗೊಂಡು ನಾಟಕವಾಡಿದ್ದಾನೆ.

ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button
error: Content is protected !!