ಯುವಜನ

ಲಂಡನ್ನಲ್ಲಿ ಎಂಬಿಎ ಅಭ್ಯಾಸಕ್ಕೆಂದು ತೆರಳಿದ್ದ ಮಗಳು ಪುಣೆಯ ಫ್ಲಾಟ್ ನಲ್ಲಿ ಶವವಾಗಿ ಪತ್ತೆ!

Views: 26

ಕನ್ನಡ ಕರಾವಳಿ ಸುದ್ದಿ: 2025ರಲ್ಲಿ ಲಂಡನ್ನಲ್ಲಿ ಎಂಬಿಎ ಓದಲು ತೆರಳಿದ್ದ 34 ವರ್ಷದ ಮಗಳು ಪುಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆ ನಿಗೂಢವಾಗಿ ಭಾರತದಲ್ಲಿ ಬದುಕುತ್ತಿದ್ದದ್ದು ಯಾಕೆ. ಎಂಬಿಎ ಓದನ್ನು ಅರ್ಧಕ್ಕೆ ಬಿಟ್ಟು ಬಂದಿದ್ಯಾಕೆ. ಆಕೆಯ ಸಾವಿಗೆ ಕಾರಣವೇನು ಎನ್ನುವುದು ಇನ್ನೂ ನಿಗೂಢವಾಗಿದೆ.

ಮುಗ್ಧಾ ದೇಶ್ಮುಖ್ ಎನ್ನುವ ಯುವತಿ ಲಂಡನ್ನಲ್ಲಿ ಎಂಬಿಎ ಓದಲು 2025 ಜುಲೈನಲ್ಲಿ ತೆರಳಿದ್ದರು. ಆದರೆ, 2026 ಅಕ್ಟೋಬರ್ನಲ್ಲಿ ಮಹಾರಾಷ್ಟ್ರದ ಪುಣೆಯ ತಮ್ಮ ಫ್ಲಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಛತ್ರಪತಿ ಸಂಭಾಜಿನಗರದ ನಿವಾಸಿ ಮುಗ್ಧಾ ದೇಶ್ಮುಖ್ ಕಳೆದ ವರ್ಷ 2025 ಜುಲೈನಲ್ಲಿ ಎಂಬಿಎಗಾಗಿ ಲಂಡನ್ಗೆ ತೆರಳಿ, 2026ರಲ್ಲಿ ಪೋಷಕರಿಗೆ ತಿಳಿಯದಂತೆ ಭಾರತಕ್ಕೆ ವಾಪಸ್ ಆಗಿದ್ದಾರೆ. ಪುಣೆಯ ಪಿಂಪ್ರಿ ಚಿಂಚ್ವಾಡ್ ವ್ಯಾಪ್ತಿಯ ಗಹುಂಜೆಯಲ್ಲಿ ಲೋಧಾ ಬೆಲ್ಮಂಡೋದಲ್ಲಿ ಫ್ಲಾಟ್ ಬಾಡಿಗೆಗೆ ಪಡೆದುಕೊಂಡು, ಇಲ್ಲಿ ಅರೆಕಾಲಿಕ ಉದ್ಯೋಗ ನಿರ್ವಹಿಸುತ್ತಾ, ನಿಗೂಢವಾಗಿ ವಾಸ ಮಾಡುತ್ತಿದ್ದರು.

ಮುಗ್ಧಾ ದೇಶ್ಮುಖ್ ಎಂಬಿಎಗಾಗಿ ಲಂಡನ್ನಲ್ಲೇ ಇದ್ದಾರೆ ಎಂದು ಪೋಷಕರು ನಂಬಿದ್ದರು. ನಿತ್ಯ ಆಕೆಯೊಂದಿಗೆ ಸಂಪರ್ಕದಲ್ಲಿ ಸಹ ಇದ್ದರು. ಆದರೆ, ಆಕೆ ಭಾರತಕ್ಕೆ ಬಂದಿದ್ದಾಳೆ ಎನ್ನುವ ಸುಳಿವೇ ಇರಲಿಲ್ಲ. ಅ.24ರಂದು ಆಕೆಗೆ ಎಷ್ಟೇ ಕರೆ ಮಾಡಿದರೂ ಕಾಲ್ ಕನೆಕ್ಟ್ ಆಗಲಿಲ್ಲ. ಕೊನೆಗೆ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಅವರ ತಂದೆ ಅವಿನಾಶ್ ದೇಶ್ಮುಖ್ ಲಂಡನ್ನಲ್ಲಿರುವ ಆಕೆಯ ಸ್ನೇಹಿತರಿಗೆ ಕರೆ ಮಾಡಿದಾಗ, ಮುಗ್ಧ ಅವರು ಆಗಸ್ಟ್ನಲ್ಲಿಯೇ ಲಂಡನ್ ತೊರೆದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಶಾಕ್ಗೊಳಗಾದ ಅವರ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

 

Related Articles

Back to top button
error: Content is protected !!