ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ಬಾಲಕರ ತಂಡ ದ್ವಿತೀಯ ಸ್ಥಾನ
Views: 12
ಕನ್ನಡ ಕರಾವಳಿ ಸುದ್ದಿ :ಶಾಲಾ ಶಿಕ್ಷಣ ಇಲಾಖೆ ( ಪದವಿಪೂರ್ವ ) ಕೊಪ್ಪಳ ಜಿಲ್ಲೆ ಹಾಗೂ ಶ್ರೀ ವಿದ್ಯಾನಿಕೇತನ ಪದವಿಪೂರ್ವ ಶ್ರೀರಾಮ ನಗರ ಇವರ ಸಂಯುಕ್ತ ಆಶ್ರಯದಲ್ಲಿ ನೆಡೆದ ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಕೊಪ್ಪಳ ಪದವಿಪೂರ್ವ ಕಾಲೇಜಿನ ಉಪನಿರ್ದೇಶಕ ರಾಜ್ ಶೇಖರ್ , ಶ್ರೀ ವಿದ್ಯಾ ನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರ್ಯ ಬಾಬು ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ ಜಿಲ್ಲಾ ಕ್ರೀಡಾ ಸಂಯೋಜಕ ತಿರುಪತಿ ನಾಯಕ ನೆಟ್ ಬಾಲ್ ವೀಕ್ಷಕರಾದ ಪ್ರೇಮನಾಥ್ ಶೆಟ್ಟಿ ಮಂಗಳೂರು , ಶಶಿಧರ ಪಟ್ಟಣ ಶೆಟ್ಟಿ ಗಂಗಾವತಿ , ರೋಹಿತ ನಾಯಕ ಪ್ರಶಸ್ತಿ ವಿತರಿಸಿದರು.
ತಂಡದ ನಾಯಕ ಕೀರ್ತೇಶ್ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು ಕೊಲ್ಲೂರು ಸಹ ಆಟಗಾರರಾದ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ರೋಹನ್ ,ಪ್ರತೀಕ್, ಅಕ್ಷಯ್, ಬಾಲಕೃಷ್ಣ, ಪ್ರೀತೇಶ್ , ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿಯ ತೇಜಸ್ , ಉಜ್ವಲ್ , ಶ್ರೀಶಾನ ಜ್ಞಾನಸುಧ ಪದವಿಪೂರ್ವ ಕಾಲೇಜಿನ ಆಯುಷ್ , ಪೂರ್ವಿಕ ಹಾಗೂ ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಯಶಸ್ ಉತ್ತಮ ಆಟವಾಡಿದರು.
ತಂಡದೊಂದಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ ಶೆಟ್ಟಿ ಹೊಸಮಠ ಉಪನ್ಯಾಸಕಿ ಸುಚಿತಾ ಶೆಟ್ಟಿ ಅರುಣ್ ಕೊಠಾರಿ ಹಾಗೂ ಅವಿನಾಶ್ ಆಚಾರ್ಯ ಉಪಸ್ಥಿತರಿದ್ದರು.






