ಶಿಕ್ಷಣ

ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರೀತೇಶ್, ಶ್ರಾವ್ಯ ರಾಷ್ಟ್ರ ಮಟ್ಟದ ನೆಟ್ ಬಾಲ್ ಪಂದ್ಯಾಟಕ್ಕೆ ಆಯ್ಕೆ

Views: 6

ಕನ್ನಡ ಕರಾವಳಿ ಸುದ್ದಿ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕೊಪ್ಪಳ ಜಿಲ್ಲೆ ಹಾಗೂ ವಿದ್ಯಾ ನಿಕೇತನ ಪದವಿಪೂರ್ವ ಕಾಲೇಜು ಶ್ರೀ ರಾಮನಗರ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ನೆಡೆದ ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಕಲಾ ವಿಭಾಗದ ಪ್ರೀತೇಶ್ ( ಕೊಲ್ಲೂರಿನ ಸುರೇಶ್ ಹಾಗೂ ವಿನೋಧ ದಂಪತಿಗಳ ಪುತ್ರ) ದ್ವಿತೀಯ ವಾಣಿಜ್ಯ ವಿಭಾಗದ ಶ್ರಾವ್ಯ ( ಹೊಸಕೊಪ್ಪದ ಸುರೇಶ ಹಾಗೂ ಸಾಧು ದಂಪತಿಗಳ ಪುತ್ರಿ ) ಪಂಜಾಬಿನಲ್ಲಿ ನೆಡೆಯುವ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಾಬು ಶೆಟ್ಟಿ ತಗ್ಗರ್ಸೆ , ಕಾಲೇಜು ಮೇಲುಸ್ತುವಾರಿಗಳಾದ ಸುರೇಂದ್ರ ಶೆಟ್ಟಿ , ಕಾಲೇಜಿನ ಸಂಚಾಲಕರಾದ ಪ್ರಶಾಂತ ಕುಮಾರ ಶೆಟ್ಟಿ ಹಾಗೂ ಕಾಲೇಜು ಆಡಳಿತ ಮಂಡಳಿಯ ಸರ್ವ ಸದಸ್ಯರು ಅಭಿನಂದನೆ ಹಾಗೂ ಶುಭ ಕೋರಿರುತ್ತಾರೆ.

Related Articles

Back to top button
error: Content is protected !!