ಜನಮನ
ವಕ್ವಾಡಿ: ಖ್ಯಾತ ಉದ್ಯಮಿ, ನಿರ್ಮಾಪಕ, ಸಮಾಜ ಸೇವಕ, ದಿ. ವಿ.ಕೆ ಮೋಹನ್ ಅವರ 66ನೇ ಜನ್ಮದಿನಾಚರಣೆ
Views: 0
ಕನ್ನಡ ಕರಾವಳಿ ಸುದ್ದಿ: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ಉದ್ಯಮಿ, ಸಮಾಜ ಸೇವಕ, ಮಹಾನ್ ದಾನಿಯಾಗಿ ಗುರುತಿಸಿಕೊಂಡಿರುವ ದಿವಂಗತ ವಿ.ಕೆ ಮೋಹನ್ ಅವರ 66ನೇ ಜನ್ಮದಿನಾಚರಣೆಯನ್ನು ವಕ್ವಾಡಿ ಪಂಚಾಯತ್ ಸರ್ಕಲ್ ನಲ್ಲಿ ಪ್ರತಿಷ್ಠಾಪಿಸಿದ ವಿ.ಕೆ ಮೋಹನ್ ಅವರ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಗೌರವ ಸಲ್ಲಿಸಲಾಯಿತು.
ದಿವಂಗತ ಡಾ. ರಾಜ್ ಕುಮಾರ್ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಡಾ. ರಾಜ್ ಕುಮಾರ್ ಕುಟುಂಬ ಮತ್ತು ಕನ್ನಡ ಚಿತ್ರರಂಗದ ಖ್ಯಾತ ನಟ- ನಟಿಯರನ್ನು ವಕ್ವಾಡಿಗೆ ಕರೆಸಿ ಮೋಹನ್ ಅವರು ರಾಜ್ಯಾದ್ಯಂತ ಗುರುತಿಸಿಕೊಂಡಿದ್ದರು.
ಅಕ್ಟೋಬರ್ 29ರಂದು ವಿ.ಕೆ ಮೋಹನ್ ಅವರ ಪತ್ನಿ ಪ್ರೇಮ ಅವರ ಕುಟುಂಬದವರಾದ ಸಾವಿತ್ರಿ, ವಿ.ಕೆ ರೂಪ, ಸತೀಶ್, ವಿ.ಕೆ ಹರೀಶ್, ವಿ.ಕೆ ಆದರ್ಶ್ ವಿ.ಕೆ ಮೋಹನ್ ಅವರ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿದರು.











