ಶಿಕ್ಷಣ

ಸತ್ಯಸಾಯಿ ಸೇವಾ ಸಂಸ್ಥೆಯಿಂದ ಕುಂದಾಪುರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನದ ಊಟದ ಉದ್ಘಾಟನೆ

Views: 41

ಕನ್ನಡ ಕರಾವಳಿ ಸುದ್ದಿ:  ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ ಉತ್ತರ ಹಾಗೂ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಕುಂದಾಪುರ ಇದರ ವತಿಯಿಂದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಊಟ “ನಿತ್ಯ ನಾರಾಯಣ ಸೇವೆ” ಯನ್ನು ಸತ್ಯ ಸೇವಾ ಸಂಸ್ಥೆ ರಾಜ್ಯ ಅಧ್ಯಕ್ಷರಾದ ಪದ್ಮನಾಭ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ರಾಜ್ಯ ಸಂಯೋಜಕರಾದ ಶ್ರೀಮತಿ ಪ್ರೀಯಾ ಪದ್ಮನಾಭ ಪೈ , ತಾಲ್ಲೂಕು ಘಟಕದ ಉಚಿತ ಊಟದ ವ್ಯವಸ್ಥೆಯ ಪ್ರಮುಖರಾದ ಶ್ರೀ ಆನಂದ, ಸಂದೀಪ ಹಾಗೂ ರಾಜ್ಯ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಶ್ರೀ ಕಿರಣ ಹೆಗ್ಡೆ, ಹಿರಿಯ ಉಪನ್ಯಾಸಕರಾದ ಶ್ರೀ ಚಂದ್ರಶೇಖರ, ಊಟದ ಸಂಚಾಲಕರಾದ ಶ್ರೀಮತಿ ನೇತ್ರಾ ಹೆಚ್.ಕೆ ಮತ್ತು ಶ್ರೀಮತಿ ನೇತ್ರಾವತಿ ಬುದ್ದಿ ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀ ಉದಯ ಕುಮಾರ ಶೆಟ್ಟಿ ಕಾಳಾವರ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button
error: Content is protected !!