ಅಗಸ್ಟ್ 9ರಂದು ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಸೇವಾ ಸಮಿತಿ ದಶಮಾನೋತ್ಸವ ಸಂಭ್ರಮ”
Views: 31
ಕನ್ನಡ ಕರಾವಳಿ ಸುದ್ದಿ: ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವಾ ಸಮಿತಿಯ ದಶಮಾನೋತ್ಸವ ಅಂಗವಾಗಿ ಆಗಸ್ಟ್ 9 ರವಿವಾರ ಬೆಳಿಗ್ಗೆ 10 ಗಂಟೆಯಿಂದ ದಶಮಾನೋತ್ಸವ ಸಮಾರಂಭದ ಸಭಾ ಕಾರ್ಯಕ್ರಮ, ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಗೌರವ ಸಮರ್ಪಣೆ, ಆಟಿಡೊಂಜಿ ದಿನ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ದೇಗುಲದ ಸೇವಾ ಸಮಿತಿ, ಅಧ್ಯಕ್ಷ ಶ್ರೀ ಎಸ್. ರಾಘವ ಶೆಟ್ಟಿಗಾರ್ ಸಾಲಿಕೇರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಶಮಾನೋತ್ಸವ ಸಭಾ ಕಾರ್ಯಕ್ರಮವು ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಎಸ್. ರಾಘವ ಶೆಟ್ಟಿಗಾರ್ ಸಾಲಿಕೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಉದ್ಘಾಟಕರಾಗಿ ಶ್ರೀ ಎಸ್. ಸುರೇಶ್ ಶೆಟ್ಟಿಗಾರ್, ಆಡಳಿತ ಮೊಕ್ತೇಸರರು. ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ, ಸಾಲಿಕೇರಿ.
ಅತಿಥಿಗಳಾಗಿ ಶ್ರೀ ಕೃಷ್ಣಾನಂದ ಶೆಟ್ಟಿಗಾರ್ ಅಧ್ಯಕ್ಷರು, ಪದ್ಮಶಾಲಿ ಸಮಾಜ ಸೇವಾ ಸಂಘ, ಮುಂಬೈ ಮತ್ತು ಮ್ಯಾನೇಜಿಂಗ್ ಟ್ರಸ್ಟಿ, ಹರ್ಷ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಸಾಲಿಕೇರಿ.
ಶ್ರೀಮತಿ ಕೀರ್ತಿ ಕುಮಾರಿ ಕೇಂದ್ರ ಸ್ಥಾನ ಸಹಾಯಕರು ಶಿವಮೊಗ್ಗ.
ಡಾ। ರೇವತಿ ಪೋಲೀಸ್ ಇನ್ಸ್‌ಪೆಕ್ಟರ್, ಹಿರಿಯೂರು ಗ್ರಾಮಾಂತರ ಪೋಲೀಸ್ ಠಾಣೆ ಚಿತ್ರದುರ್ಗ.
ಡಾ| ಚಂದ್ರಶೇಖರ್ ವಿ.ಎಸ್.ಅಧ್ಯಕ್ಷರು, ಕೋಟೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘ, ಕೋಟೇಶ್ವರ. President, Senior Chamber International, Udupi Costal Legion.
ಸನ್ಮಾನ: ಶ್ರೀ ಸುರೇಶ್ ಶೆಟ್ಟಿಗಾರ್ ಹಂದಾಡಿ ಸಮಾಜ ಸೇವಕರು, ಕುಮಾರಿ ನವ್ಯಶ್ರೀ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿ (ರಾಜ್ಯಪಾಲರಿಂದ ಪ್ರಶಸ್ತಿ ಪುರಸ್ಕೃತರು)
ಆಟಿಡೊಂಜಿ ದಿನ ಕಾರ್ಯಕ್ರಮ ಸಾಂಪ್ರದಾಯಿಕ ಖಾದ್ಯಗಳ ಕೂಟ :ಸಮಿತಿಯ ಮಹಿಳಾ ಸದಸ್ಯೆಯರಿಂದ ತಯಾರಿಸಲ್ಪಟ್ಟ ಆಷಾಢ ಮಾಸದ ತರಹೇವಾರಿ ಖಾದ್ಯಗಳ ರಸದೌತಣ
ಗೌರವ ಪೂರ್ವಕವಾಗಿ ತಮ್ಮನ್ನು ಆಮಂತ್ರಿಸುವ,
ಶ್ರೀ ಜಗದೀಶ ಶೆಟ್ಟಿಗಾರ್, ಶ್ರೀಮತಿ ಹೇಮಲತಾ ರಘು ಶೆಟ್ಟಿಗಾರ್- ಗೌರವ ಸಲಹೆಗಾರರು.
ಶ್ರೀ ಶ್ರೀನಿವಾಸ್ ಶೆಟ್ಟಿಗಾರ್ ಮಟಪಾಡಿ, ಶ್ರೀಮತಿ ಗೀತಾ ಚಂದ್ರಶೇಖರ್ ಸಾಲಿಕೇರಿ- ಉಪಾಧ್ಯಕ್ಷರು.
ಶ್ರೀ ರಜನಿಕಾಂತ್ ಶೆಟ್ಟಿಗಾರ್ ಸಾಲಿಕೇರಿ- ಪ್ರಧಾನ ಕಾರ್ಯದರ್ಶಿ.
ಶ್ರೀ ಅಶೋಕ್ ಶೆಟ್ಟಿಗಾರ್ ಬೈಕಾಡಿ- ಕೋಶಾಧಿಕಾರಿ.
ಶ್ರೀ ಪ್ರಭಾಕರ ಶೆಟ್ಟಿಗಾರ್ ಕೆರೆಬದಿ- ಜತೆ ಕಾರ್ಯದರ್ಶಿ.
ಶ್ರೀಮತಿ ಶೈಲಜಾ ಸುಧಾಕರ್ ಶೆಟ್ಟಿಗಾರ್- ಜತೆ ಕಾರ್ಯದರ್ಶಿ.
ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸರ್ವಸದಸ್ಯರು ಸಾಲಿಕೇರಿ ಸೇವಾ ಸಮಿತಿ, ಸಾಲಿಕೇರಿ






