ಧಾರ್ಮಿಕ

ವಕ್ವಾಡಿ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Views: 49

ಕನ್ನಡ ಕರಾವಳಿ ಸುದ್ದಿ: ಹಿಂದೂ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ನಿರ್ದೇಶನದಂತೆ ಮುಜರಾಯಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆಸಿ ಮಹಿಳೆಯರಿಗೆ ಅರಶಿಣ, ಕುಂಕುಮ, ಬಳೆ, ಹೂ ಕೊಟ್ಟು ಗೌರವಿಸಬೇಕು ಎಂಬ ನಿಯಮದಂತೆ ವಕ್ವಾಡಿ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸತ್ಯರಂಜನ್‌ ಹೆಗ್ಡೆ, ಸದಸ್ಯರಾದ ಮಮತಾ ಶೆಟ್ಟಿ, ಅರ್ಚಕರಾದ ಕೃಷ್ಣ ಐತಾಳರು ಉಪಸ್ಥಿತರಿದ್ದರು.

ಇಂದು ನಡೆದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪದ್ಮಾವತಿ ಆಚಾರ್ಯ ಅವರನ್ನು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಮತಾ ಶೆಟ್ಟಿ ಶಾಲು ಹೊದಿಸಿ ಗೌರವಿಸಿದರು. ಅರ್ಚಕರಾದ ಕೃಷ್ಣ ಐತಾಳರು ಸ್ಮರಣಿಕೆ ನೀಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಧರ್ಮಸ್ಥಳ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

 

Related Articles

Back to top button
error: Content is protected !!