ಧಾರ್ಮಿಕ

ಸೆ.14ರಿಂದ 16ರ ವರೆಗೆ ಬಾರ್ಕೂರು ರಂಗನಕೇರಿ ಶೆಟ್ಟಿಗಾರ್ ಇಂಡಸ್ಟ್ರೀಸ್ ಸಾರ್ವಜನಿಕ ಶ್ರೀ ಗಣೇಶೋತ್ಸವ 

Views: 42

ಕನ್ನಡ ಕರಾವಳಿ ಸುದ್ದಿ:ಬಾರ್ಕೂರು ರಂಗನಕೇರಿ ಶೆಟ್ಟಿಗಾರ್ ಇಂಡಸ್ಟ್ರೀಸ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಗಳು ದಿನಾಂಕ 14.09.2026ನೇ ಸೋಮವಾರದಿಂದ 16.09.2026ನೇ ಬುಧವಾರ ಪರ್ಯಂತ ಭಕ್ತ ಜನರ ಸಹಕಾರದೊಂದಿಗೆ ವೇದಮೂರ್ತಿ ಎನ್. ರಮೇಶ ಭಟ್ ನಾಯರ್‌ಬೆಟ್ಟು ಇವರ ಪೌರೋಹಿತ್ಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ದಿನಾಂಕ:14.09.2026ನೇ ಸೋಮವಾರ ಪೂರ್ವಾಹ್ನ ಗಂಟೆ 10.10 ಶ್ರೀ ಗಣಪತಿ ವಿಗ್ರಹ ಪ್ರತಿಷ್ಠಾಪನೆ, ಪೂರ್ವಾಹ್ನ ಗಂಟೆ 10.10ರಿಂದ ಭಜನೆ, ಸಂಜೆ ಗಂಟೆ 6.00ರವರೆಗೆ ಮಧ್ಯಾಹ್ನ ಗಂಟೆ 12.30 ರಿಂದ ಮಹಾಪೂಜೆ, ಮಂಗಳಾರತಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 6.00 ರಿಂದ ರಂಗಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 7.15ರಿಂದ ಮನು ಹಂದಾಡಿ ಮತ್ತು ತಂಡದವರಿಂದ ‘ಕಾಮಿಡಿ ಗ್ಯಾಂಗ್’

ದಿನಾಂಕ 15.09.2026ನೇ ಮಂಗಳವಾರ ಪೂರ್ವಾಹ್ನ ಗಂಟೆ 9.00ರಿಂದ ಗಣಹೋಮ, ಮಹಾಪೂಜೆ, ಮಹಾಮಂಗಳಾರತಿ, ಪೂರ್ವಾಹ್ನ 10.30ರಿಂದ ಭಜನೆ, ಸಂಜೆ 6.00ರ ತನಕ ಸಂಜೆ 6.00 ರಿಂದ ಖ್ಯಾತ ಗಾಯಕ ನಿರೂಪಕ ರಾಜೇಶ್ ಶ್ಯಾನುಭೋಗ್ ಬಾರಕೂರು ಅವರ ಪಿ.ಕಾಳಿಂಗರಾವ್ ಸ್ಮೃತಿ ಮೆಲೋಡಿಸ್ (ರಿ.) ಬಾರಕೂರು ತಂಡದವರಿಂದ “ಗಾನಾಮೃತ”, ಭಕ್ತಿಭಾವ ಜಾನಪದ ಗೀತೆಗಳು, ಮಧ್ಯಾಹ್ನ ಗಂಟೆ 12.30 : ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 7.00 : ರಂಗಪೂಜೆ,

ರಾತ್ರಿ ಗಂಟೆ 8.00 ರಿಂದ  ಅಭಿನಂದನಾ ಕಾರ್ಯಕ್ರಮ ಹಾಗೂ ದಿನಾಂಕ 23.08.2026ರಂದು ನಡೆದ ಕೆಸರು ಗದ್ದೆ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ

ರಾತ್ರಿ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ್ ಸತೀಶ್‌ ಹೆಮ್ಮಾಡಿ ನೇತೃತ್ವದ ಭ್ರಮಾಲೋಕ ಜಾದೂ ತಂಡ ಅರ್ಪಿಸುವ “ಮಿರಾಕಲ್ ಮ್ಯಾಜಿಕ್” (ನಾನಾ ಬಗೆಯ ವಿಶೇಷ ಜಾದೂವಿನ ಸಮ್ಮಿಲನ)

ದಿನಾಂಕ :16.09.2026ನೇ ಬುಧವಾರ ಪೂರ್ವಾಹ್ನ ಗಂಟೆ 9.00 : 108 ಕಾಯಿ ಗಣಯಾಗ, ಮಹಾಪೂಜೆ, ಮಧ್ಯಾಹ್ನ ಗಂಟೆ 12.00  ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 12.30 : ಮಹಾ ಅನ್ನಸಂತರ್ಪಣೆ, ಮಧ್ಯಾಹ್ನ ಗಂಟೆ 12.30 ರಿಂದ ಟೀಮ್ ಗಾನಾಮೃತ ಬಾರಕೂರು ಇವರಿಂದ “ಸಂಗೀತ ರಸಮಂಜರಿ” ಅಪರಾಹ್ನ ಗಂಟೆ 4.30 : ಗಣಪತಿ ವಿಸರ್ಜನಾ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ವಿಸರ್ಜನಾ ಮೆರವಣಿಗೆ, ಜಲಸ್ತಂಭನ

ಶೆಟ್ಟಿಗಾ‌ರ್ ಇಂಡಸ್ಟ್ರೀಸ್‌ ನಿಂದ ವಾಹನಗಳ ಮೂಲಕ ಶ್ರೀ ಬಟ್ಟೆವಿನಾಯಕ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ 5:30 ಗಂಟೆಗೆ ಪುರಮೆರವಣಿಗೆ ಹೊರಟು ರಂಗನಕೇರಿಯ ಶ್ರೀ ರತ್ನಗರ್ಭಗಣಪತಿ ದೇವಾಲಯದ ಕೆರೆಯಲ್ಲಿ ಸಿಡಿಮದ್ದು ಪ್ರದರ್ಶನದೊಂದಿಗೆ ವಿಸರ್ಜನೆ.

ಕೆರೆ ಉತ್ಸವ ಮತ್ತು ಜಲಸ್ತಂಭನ ಸಹಕಾರ

ಮೊಗವೀರ ಯುವಕ ಸಂಘ, ಬೆಣ್ಣೆಕುದ್ರು, ಬಾರಕೂರು

ಮೆರವಣಿಗೆಯ ವಿಶೇಷ ಆಕರ್ಷಣೆ

ಆಕರ್ಷಕ ಟ್ಯಾಬ್ಲೊಗಳು

ಪ್ರವೀಣ್ ಬುಕ್ಕಿಗುಡ್ಡೆ ಮತ್ತು ಬಳಗದವರಿಂದ

“ಸಿಂಗಾರಿ ಮೇಳಮ್” ಶೈಲಿಯ ಚಂಡೆ ವಾದನ ಹಾಗೂ ವಿವಿಧ ಭಜನಾ ತಂಡಗಳಿಂದ ಅದ್ದೂರಿ ಕುಣಿತ ಭಜನೆ

ತಾವೆಲ್ಲರೂ ಆಗಮಿಸಿ, ತನು-ಮನ-ಧನ ಸಹಾಯವನ್ನಿತ್ತು ಪ್ರೋತ್ಸಾಹಿಸಿ, ಶ್ರೀ ಮಹಾಗಣಪತಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ,

ಬಿ. ಶ್ರೀನಿವಾಸ ಶೆಟ್ಟಿಗಾರ್ ಗೌರವಾಧ್ಯಕ್ಷರು

ಬಿ. ಉಮೇಶ ಆಚಾರ್ಯ ಅಧ್ಯಕ್ಷರು,

ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು

Related Articles

Back to top button
error: Content is protected !!