ಸಾಮಾಜಿಕ

ಕುಂದಾಪುರ :ಏಡ್ಸ್ ಜನಜಾಗ್ರತಿ ಮತ್ತು ಕ್ಷಯ ರೋಗದ ಮಾಹಿತಿ ಶಿಬಿರ

Views: 0

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್, ಜಿಲ್ಲಾ ಏಡ್ಸ್ ನಿಯಂತ್ರಣ ಕೇಂದ್ರ ಉಡುಪಿ, ಜಿಲ್ಲಾ ಕ್ಷಯರೋಗ ನಿರ್ಮೂಲನ ಘಟಕ ಉಡುಪಿ ಹಾಗೂ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇವರ ಜಂಟಿ ಸಹಯೋಗದಲ್ಲಿ ಏಡ್ಸ್ ಜನಜಾಗ್ರತಿ ಮತ್ತು ಕ್ಷಯರೋಗದ ಬಗ್ಗೆ ಮಾಹಿತಿ ಕಾರ್ಯಾಗಾರ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರದಲ್ಲಿ ಜರುಗಿತು.

ರೋಟರಿ ಅಧ್ಯಕ್ಷರಾದ ರೋ.ನಾಗರಾಜ ನಾಯ್ಕ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ಕ್ಷಯರೋಗದ ಬಗ್ಗೆ ಸೀನಿಯರ್ ಟ್ರಿಟಮೆಂಟ್ ಸೂಪರ್‌ವೈಸರ್ ಶ್ರೀ ಗುರುದಾಸ, ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಹಾಗೂ ಏಡ್ಸ್ ನಿಯಂತ್ರಣದ ಬಗ್ಗೆ Iಅಖಿಅ ಕೌನ್ಸಿಲರ್ ಶ್ರೀಮತಿ ನಳಿನಾಕ್ಷಿ, ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇವರು ಮಾಹಿತಿ ನೀಡಿದರು.

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಪ್ರೊಫೆಸರ್ ಬಾಲನಾಗೇಶ್ವರ ಎಸ್.ಪ್ರೊಫೆಸರ್ ವರುಣ ಕುಮಾರ, ಪ್ರೊಫೆಸರ್ ಅಕ್ಷತಾ ನಾಯ್ಕ್, ರೋಟರಿ ನಿಕಟಪೂರ್ವ ಕಾರ್ಯದರ್ಶಿ ನವೀನ ಡಿಸೋಜ, ಸದಸ್ಯರಾದ ಗೀತಾ ಮುಕುಂದನ್, ಕಾರ್ಯದರ್ಶಿ ಪ್ರಶಾಂತ ಹವಾಲ್ದಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button
error: Content is protected !!