ಜನಮನ

ಕತಾರ್‌ನ ರಾಸ್‌ ಲಫಾನ್ ಕೈಗಾರಿಕಾ ಪ್ರದೇಶದ ಮೇಲೆ ಕ್ಷಿಪಣಿ ದಾಳಿ:ಅನಿಲ ಸರಬರಾಜು ಅಸ್ತವ್ಯಸ್ತ ಭೀತಿ 

Views: 33

ಕನ್ನಡ ಕರಾವಳಿ ಸುದ್ದಿ: ಇರಾನ್ ಕತಾರ್‌ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ಈ ಸಂಘರ್ಷದಲ್ಲಿ ಇಸ್ರೇಲ್ ಮತ್ತು ಅಮೆರಿಕ ಕೂಡ ತೊಡಗಿಕೊಂಡಿದ್ದು, ಪರಿಣಾಮ ವಿಶ್ವದ ಇಂಧನ ಮಾರುಕಟ್ಟೆ ಮೇಲೆ ಬೀರುತ್ತಿದೆ.

ಕತಾರ್‌ನ ರಾಸ್‌ ಲಫಾನ್ ಕೈಗಾರಿಕಾ ಪ್ರದೇಶದ ಮೇಲೆ ಕ್ಷಿಪಣಿ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಇದರಿಂದ ಅನಿಲ ಸರಬರಾಜು ಅಸ್ತವ್ಯಸ್ತವಾಗುವ ಭೀತಿ ಎದುರಾಗಿದೆ. ಅನಿಲ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದ್ದು, ಇದರ ಪರಿಣಾಮವನ್ನು ಭಾರತವೂ ಅನುಭವಿಸುವ ಸಾಧ್ಯತೆ ಇದೆ.

ಭಾರತಕ್ಕೆ ಕತಾರ್ ಪ್ರಮುಖ ಅನಿಲ ಪೂರೈಕೆದಾರವಾಗಿದ್ದು, ಒಟ್ಟು ಆಮದುಗಳಲ್ಲಿ ದೊಡ್ಡ ಹಂಚಿಕೆಯನ್ನು ಹೊಂದಿದೆ. ಹಾರ್ಮುಜ್‌ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಾದ ಕಾರಣ ಕೆಲವು ಭಾರತೀಯ ಹಡಗುಗಳು ಸಮುದ್ರದಲ್ಲೇ ಸಿಲುಕಿಕೊಂಡಿವೆ ಎನ್ನಲಾಗಿದೆ.

ಈ ಬೆಳವಣಿಗೆ ಮುಂದುವರಿದರೆ, ಭಾರತವು ಪರ್ಯಾಯ ಮೂಲಗಳಿಂದ ಹೆಚ್ಚಿನ ದರಕ್ಕೆ ಅನಿಲ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು.

Related Articles

Back to top button
error: Content is protected !!