ಇತರೆ
ವಡ್ಡರ್ಸೆ ಸಮೀಪ ಗರಿಕೆ ಮಠದಲ್ಲಿ ಕಲ್ಲುಕೋರೆ ಕೆರೆಗೆ ಈಜಲು ತೆರಳಿದ ವ್ಯಕ್ತಿ ನೀರುಪಾಲು
Views: 35
ಕನ್ನಡ ಕರಾವಳಿ ಸುದ್ದಿ: ಪಾಳುಬಿದ್ದ ಕಲ್ಲುಕೋರೆ ಕೆರೆಗೆ ಈಜಲು ತೆರಳಿದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಸಮೀಪ ಗರಿಕೆ ಮಠದಲ್ಲಿ ಗುರುವಾರ ನಡೆದಿದೆ.
ತಮಿಳುನಾಡು ಮೂಲದ ಕಾರ್ಮಿಕ ಅರುಣ್ (38) ಮೃತಪಟ್ಟವರು.
ಗುರುವಾರ ಮಧ್ಯಾಹ್ನ ಗರಿಕೆ ಮಠದ ಬಳಿಯಿರುವ ಕಲ್ಲುಕೋರೆಗೆ ಈಜಲು ಇಳಿದ ಅರುಣ್ ಮುಳುಗಿದ್ದು, ಮೃತ ದೇಹ ಹುಡುಕಲಾಗದೆ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಕರೆಸಲಾಯಿತು.ಸುದೀರ್ಘ ಕಾಲದ ಹುಡುಕಾಟದ ಬಳಿಕ ಕೊನೆಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಘಟನಾ ಸ್ಥಳಕ್ಕೆ ಧಾವಿಸಿದ ಬ್ರಹ್ಮಾವರ ಠಾಣಾ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.






