ಇತರೆ
ಆಟವಾಡುತ್ತಿದ್ದ ವೇಳೆ ಶಾಲೆ ಗೇಟ್ ಬಿದ್ದು 4 ವರ್ಷದ ಮಗು ದುರ್ಮರಣ
Views: 11
ಕನ್ನಡ ಕರಾವಳಿ ಸುದ್ದಿ: ಶಾಲಾ ಕಾಂಪೌಂಡ್ ಗೇಟ್ ಬಿದ್ದು 4 ವರ್ಷದ ಮಗು ದುರ್ಮರಣ ಕ್ಕೀಡಾದ ಘಟನೆ ಕುಶಾಲನಗರ ಬಳಿಯ ಬಸವನಹಳ್ಳಿ ಹಾಡಿ ಯಲ್ಲಿ ನಡೆದಿದೆ.
ಸತೀಶ್ -ಪವಿತ್ರ ದಂಪತಿ ಪುತ್ರಿ ಅಪೂರ್ವ (4) ಮೃತ ಕಂದಮ್ಮ. ಮಳೆಯಿಂದ ಶಿಥಿಲಗೊಂಡಿದ್ದ ಕಾಂಪೌಂಡ್ ಏಕಾಏಕಿ ಕುಸಿದಿದೆ. ಮನೆ ಸಮೀಪದಲ್ಲೇ ಶಾಲೆಯಿದ್ದು, ಅಲ್ಲಿಗೆ ಬಂದು ಬಾಲಕಿ ಅಪೂರ್ವ ಆಟವಾಡುತ್ತಿದ್ದಳು. ಈ ವೇಳೆ ದುರಂತ ನಡೆದಿದೆ. ಎಸ್‌ಡಿಎಂಸಿ ಹಾಗೂ ಶಾಲಾ ಮುಖ್ಯೋಪಾಧ್ಯರ ವಿರುದ್ಧ ಗ್ರಾಮಸ್ಥರು ಕಿಡಿಕಾರಿ ದರು. ಸ್ಥಳಕ್ಕೆ ಪೊಲೀಸರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.






