ಸಾಮಾಜಿಕ
ಮಾ.15ರಂದು ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರಿನಲ್ಲಿ “ಮಾಗಣೆ ಗುರಿಕಾರರ ಸಮಾವೇಶ”
Views: 169
ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವೀರೇಶ್ವರ ಸೇವಾ ಸಮಿತಿ, ಸಂಘಟನಾ ಸಮಿತಿ, ಸಮಾಜ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮಾರ್ಚ್ 15ರಂದು ರವಿವಾರ ಅಪರಾಹ್ನ 3 ಗಂಟೆಗೆ ‘ಮಾಗಣೆ ಗುರಿಕಾರರ ಸಮಾವೇಶ’ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಈಗಾಗಲೇ ಮಾಗಣೆ ಮಟ್ಟದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಸಭೆ ನಡೆಸಿ ಸಮಾಜ ಮತ್ತು ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ಉತ್ತಮ ತಳಮಟ್ಟದ ಸಂಘಟನೆಯೊಂದಿಗೆ ಇದೀಗ ಗುರಿಕಾರರು ಸಮಾಜವನ್ನು ವ್ಯವಸ್ಥಿತವಾಗಿ ಮುನ್ನಡೆಸುವ, ಮಾರ್ಗದರ್ಶನ ನೀಡುವ, ಸಂಸ್ಕೃತಿಯನ್ನು ರಕ್ಷಿಸುವ ಜವಾಬ್ದಾರಿಯುತ ಸ್ಥಾನ ಹೊಂದಿದ ಅವರಿಗೆ ಶುಭ ಮತ್ತು ಅಪರ ಕ್ರಿಯೆ ಕಾರ್ಯದಲ್ಲಿ ದೇವಸ್ಥಾನದ 7 ಮಾಗಣೆ ವ್ಯಾಪ್ತಿಯ ಬಾರ್ಕೂರು,ವಕ್ವಾಡಿ, ಹೆಂಗವಳ್ಳಿ- ಅಮಾಸೆಬೈಲು,ಬಸ್ರೂರು, ಕೋಟ, ನೀಲಾವರ- ಸೂರಾಲು, ಜಪ್ತಿ ಮಾಗಣೆ ಗುರಿಕಾರರಿಗೆ ವಿಶೇಷ ತರಬೇತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ಬಾರಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆ ಇದರ ಸ್ಥಾಪಕ ಅಧ್ಯಕ್ಷರು ಹಾಗೂ ಹಿರಿಯ ಮಾಗಣೆ ಗುರಿಕಾರರಾದ ಶ್ರೀ ರಾಜೇಂದ್ರ ಶೆಟ್ಟಿಗಾರ ಬಸ್ರೂರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಗುರಿಕಾರರಿಗೆ ತರಬೇತಿ ನೀಡಲಿದ್ದಾರೆ.
ಉದ್ಘಾಟಕರು: ಬಾರಕೂರು ರಂಗನಕೇರಿ ಶ್ರೀ. ಶ್ರೀನಿವಾಸ ಶೆಟ್ಟಿಗಾರ. ಆಡಳಿತ ಮೊಕ್ತೇಸರರು, ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಾರ್ಕೂರು.
ಸರ್ವರಿಗೂ ಆದರದ ಸ್ವಾಗತ ಬಯಸುವ, ಆಡಳಿತ ಮೊಕ್ತೇಸರರು, ಮತ್ತು ಆಡಳಿತ ಮಂಡಳಿ, ಸಹ ಮೊಕ್ತೇಸರರು, ಗುರಿಕಾರರು.ಅಭಿವೃದ್ಧಿ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಶ್ರೀ ವೀರೇಶ್ವರ ಸೇವಾ ಸಮಿತಿ, ಸಂಘಟನಾ ಸಮಿತಿ, ಯುವ ವೇದಿಕೆ, ಮಹಿಳಾ ವೇದಿಕೆ, ಸಮಾಜ ಸೇವಾ ಟ್ರಸ್ಟ್, ಪ್ರಾಯೋಜಕರಾದ ಶ್ರೀಮತಿ ವೀಣಾಶ್ರೀ ಮತ್ತು ಶ್ರೀ ಬಾಲಕೃಷ್ಣ ಶೆಟ್ಟಿಗಾರ್ ದೇವು ಮನೆ ವಕ್ವಾಡಿ.






