ಪತ್ನಿಯ ಎರಡನೇ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಗಮನಸೆಳೆದ ಮಾಜಿ ಪತಿ!
Views: 118
ಕನ್ನಡ ಕರಾವಳಿ ಸುದ್ದಿ: ಮಲಯಾಳಂನ ಖ್ಯಾತ ಗಾಯಕಿ ಮತ್ತು ಸಂಗೀತ ನಿರ್ದೇಶಕಿ ಗೌರಿ ಲಕ್ಷ್ಮಿ ಅವರ ಮದುವೆ ಅತ್ಯಂತ ಪ್ರಬುದ್ಧವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ. ವಿಭಿನ್ನ ರೀತಿಯ ಇವರ ಮದ್ಯೆ ಸಮಾರಂಭದ ಫೋಟೋ ಭಾರೀ ವೈರಲ್ ಆಗಿದೆ. ಗೌರಿ ಲಕ್ಷ್ಮಿ ಅವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮದಲ್ಲಿ ಅವರ ಮಾಜಿ ಪತಿ ಗಣೇಶ್ ವೆಂಕಟರಮಣಿ ಅವರು ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಗೌರಿ ಲಕ್ಷ್ಮಿ ಅವರು ಖ್ಯಾತ ದೃಶ್ಯ ಕಲಾವಿದ ಕಲೇಶ್ ಗೋವಿಂದನ್ ಅವರ ಜೊತೆ ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮದುವೆಯಲ್ಲಿ ಗೌರಿ ಅವರ ಮಾಜಿ ಪತಿ ಹಾಗೂ ಪ್ರಸಿದ್ದ ಡ್ರಮ್ಮರ್ ಗಣೇಶ್ ವೆಂಕಟರಮಣಿ ಅವರು ಕೂಡಾ ಭಾಗವಹಿಸಿ ನವದಂಪತಿಯ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋ ಹಂಚಿಕೊಂಡು, ಎಲ್ಲಾ ಕುಟುಂಬ ಸದಸ್ಯರೂ ಒಂದೇ ರಕ್ತಕ್ಕೆ ಸೇರಿದವರಾಗಿರಬೇಕು ಎಂದೇನಿಲ್ಲ ಎಂಬ ಅರ್ಥಪೂರ್ಣ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಗೌರಿ ಮತ್ತು ಗಣೇಶ್ ದೀರ್ಘಕಾಲದ ಪ್ರೀತಿಸಿ ನಂತರ 2018ರಲ್ಲಿ ವಿವಾಹವಾಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನ ಪಡೆದರೂ ಇವರಿಬ್ಬರ ನಡುವಿನ ಪರಸ್ಪರ ಗೌರವ ಮತ್ತು ಸ್ನೇಹ ಮಾಸಿಲ್ಲ. ಇಂದಿಗೂ ಗೌರಿ ಅವರ ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ವಿದೇಶಿ ಪ್ರವಾಸಗಳಲ್ಲಿ ಗಣೇಶ್ ಅವರೇ ಡ್ರಮ್ಮರ್ ಆಗಿ ಸಾಥ್ ನೀಡುತ್ತಾರೆ. ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಇಷ್ಟು ಪ್ರಬುದ್ಧವಾಗಿ ನಿಭಾಯಿಸುತ್ತಿರುವ ಈ ಜೋಡಿಯನ್ನು ನೋಡಿ ನೆಟ್ಟಿಗರು ಡಿವೋರ್ಸ್ ಆದ ಮೇಲೆ ಹೀಗೂ ಇರಬಹುದಾ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ದಾಂಪತ್ಯ ಜೀವನದಲ್ಲಿ ಡಿವೋರ್ಸ್ ಆದ ಮೇಲೆ ಒಬ್ಬರಿಗೊಬ್ಬರು ಪರಸ್ಪರ ಮುಖ ನೋಡೋದು, ಮಾತನಾಡುವುದು ಅತ್ಯಂತ ವಿರಳ. ದಂಪತಿಯ ಮಧ್ಯೆ ದೂರುಗಳೇ ಹೆಚ್ಚಿರುತ್ತದೆ. ಆದರೆ ಮಲಯಾಳಂನ ಖ್ಯಾತ ಗಾಯಕಿ ಮತ್ತು ಸಂಗೀತ ನಿರ್ದೇಶಕಿ ಗೌರಿ ಲಕ್ಷ್ಮಿ ಅವರ ಮದುವೆ ಅತ್ಯಂತ ಪ್ರಬುದ್ಧವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ. ವಿಭಿನ್ನ ರೀತಿಯ ಇವರ ಮದ್ಯೆ ಸಮಾರಂಭದ ಫೋಟೋ ಭಾರೀ ವೈರಲ್ ಆಗಿದೆ. ಗೌರಿ ಲಕ್ಷ್ಮಿ ಅವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮದಲ್ಲಿ ಅವರ ಮಾಜಿ ಪತಿ ಗಣೇಶ್ ವೆಂಕಟರಮಣಿ ಅವರು ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.






