ಶಿಕ್ಷಣ

ಬಸ್ರೂರು ಕು.ಖುಷಿ ಶೆಟ್ಟಿಗಾರ್ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಶೇಷ ಸಾಧನೆ

Views: 173

ಕನ್ನಡ ಕರಾವಳಿ ಸುದ್ದಿ:ಕದಂಬ ಇಂಟರ್ನ್ಯಾಷನಲ್ ಸ್ಕೂಲ್, ಶಿರಾ ಇಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಸ್ಸೂರಿನ ಕುಮಾರಿ ಖುಷಿ ಶೆಟ್ಟಿಗಾರ್ ವಿಶೇಷ ಸಾಧನೆ ಮಾಡಿ ಮೂರನೇ ಸ್ಥಾನ ಗಳಿಸಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ನಡೆದ 14ರ ವಯೋಮಿತಿಯಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಈಕೆ ಬಸ್ರೂರು ಸುರಕ್ಷಾ ಪೂಟ್ ವೇರ್ ಇದರ ಮಾಲಿಕ ಹಾಗೂ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹ ಮೊಕ್ತೇಸರರಾದ ಶ್ರೀ ವಿವೇಕಾನಂದ ಶೆಟ್ಟಿಗಾರ್ ಮತ್ತು ಶ್ರೀಮತಿ ಸುಶ್ಮಿತಾ ಶೆಟ್ಟಿಗಾ‌ರ್ ಇವರ ಪುತ್ರಿಯಾಗಿರುತ್ತಾರೆ. ಪ್ರತಿಭಾವನ್ವಿತ ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ದೇವಳದ ಆಡಳಿತ ಮೊಕೇಸರರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಮತ್ತು ಆಡಳಿತ ಮಂಡಳಿ, ವಿವಿಧ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Related Articles

Back to top button
error: Content is protected !!