ಶಿಕ್ಷಣ

ಬ್ರಹ್ಮಾವರ ಫಾರ್ಚೂನ್ ಕಾಲೇಜ್ ಆಫ್‌ ಪ್ಯಾರಾಮೆಡಿಕಲ್ ಸೈನ್ಸಸ್: ಅ.12ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ 

Views: 0

ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಫಾರ್ಚೂನ್ ಕಾಲೇಜ್ ಆಫ್‌ ಪ್ಯಾರಾಮೆಡಿಕಲ್ ಸೈನ್ಸಸ್ ಇವರ ನೇತೃತ್ವದಲ್ಲಿ ಹಾಗೂ ಭಾರತೀಯ ರೆಡ್‌ ಕ್ರಾಸ್ ಸೊಸೈಟಿ ರಕ್ತದಾನ ಕೇಂದ್ರ, ಕುಂದಾಪುರ ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಹಡು, ಪಾಂಡೇಶ್ವರ ಸಾಮ್ರಾಜ್ಜಿ ಆಟೋ ಚಾಲಕರ ಸಂಘ ಮಾಬುಕಳ ಇವರ ಸಂಯುಕ್ತ ಆಶಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಅಗಸ್ಟ್ 12ರಂದು ಬುಧವಾರ ಪೂರ್ವಾಹ್ನ 9 ಗಂಟೆಯಿಂದ ಕಾಲೇಜಿನ ಅಡಿಟೋರಿಯಂನಲ್ಲಿ ನಡೆಯಲಿದೆ.ಎಂದು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಇದರ ಅಧ್ಯಕ್ಷರಾದ ಡಾ.ತಾರಾನಾಥ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ದಿನೇಶ್ ಬಾಂಧವ್ಯ, ಸಂಸ್ಥಾಪಕರು, ಬಾಂಧವ್ಯ ಫೌಂಡೇಶನ್ ಮತ್ತು ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಹಸಿರು ಪ್ರಶಸ್ತಿ ಪುರಸ್ಕೃತರು, ಗೌರವ ಅತಿಥಿಗಳು ಡಾ. ತಾರಾನಾಥ ಶೆಟ್ಟಿ ಅಧ್ಯಕ್ಷರು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಬ್ರಹ್ಮಾವರ, ಶ್ರೀ ಎಸ್. ಜಯಕರ ಶೆಟ್ಟಿ ಅಧ್ಯಕ್ಷರು ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಕ್ತ ಕೇಂದ್ರ ಕುಂದಾಪುರ, ಪ್ರೋ. ಸ್ಮಿತಾ ಮೋಲ್ ಇಎಮ್. ಪ್ರಾಂಶುಪಾಲರು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಬ್ರಹ್ಮಾವರ, ಶ್ರೀ ವೆಂಕಟೇಶ ಪೂಜಾರಿ ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಹಡು, ಪಾಂಡೇಶ್ವರ ಭಾಗವಹಿಸಲಿದ್ದಾರೆ.

Related Articles

Back to top button
error: Content is protected !!