ಯುವಜನ

ಕಾಪು ಮಟ್ಟು ಬೀಚ್‌ನಲ್ಲಿ ಈಜಲು ತೆರಳಿದ  ವಿದ್ಯಾರ್ಥಿ ಸಮುದ್ರ ಪಾಲು

Views: 96

ಕನ್ನಡ ಕರಾವಳಿ ಸುದ್ದಿ: ಕಾಪು ಕಟಪಾಡಿ ಸಮೀಪದ ಮಟ್ಟು ಬೀಚ್‌ನಲ್ಲಿ ಈಜುತ್ತಿದ್ದ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಸಮುದ್ರ ಪಾಲಾಗಿರುವ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಮಣಿಪಾಲ ಕಾಲೇಜಿನ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಮಟ್ಟು ಬೀಚ್‌ಗೆ ಆಗಮಿಸಿ ಸಮುದ್ರದಲ್ಲಿ ನೀರಲ್ಲಿ ಆಡುತ್ತಿದ್ದರೆನ್ನಲಾಗಿದೆ. ಈ ವೇಳೆ ಸ್ಥಳೀಯರು ಅಪಾಯದ ಬಗ್ಗೆ ಇವರನ್ನು ಎಚ್ಚರಿಸಿದ್ದರು. ಆದರೂ ಇವರು ಅದನ್ನು ಲೆಕ್ಕಿಸದೆ ಸಮುದ್ರದಲ್ಲಿ ಈಜುತ್ತಿದ್ದರೆನ್ನಲಾಗಿದೆ.

ಈ ವೇಳೆ ಮಧ್ಯಪ್ರದೇಶ ಮೂಲದ ವಿದ್ಯಾರ್ಥಿ ವೀರುರುಲ್ಕರ್ (18) ಸಮುದ್ರದ ಅಲೆಗಳಿಗೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹ ಅಲ್ಲೇ ಸಮೀಪ ಪತ್ತೆಯಾಗಿದೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button
error: Content is protected !!