ಜೋಗಿ ಪ್ರೇಮ್ ಬರೆದ ʻಸೆರಗ ಸರ್ಸೆ’ ಹಾಡಿಗೆ ಸಿನಿಪ್ರಿಯರ ಆಕ್ರೋಶ
Views: 48
ಕನ್ನಡ ಕರಾವಳಿ ಸುದ್ದಿ: ʻಕೆಡಿʼ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಈಗ ವಿವಾದದ ಸುಳಿಗೆ ಸಿಲುಕಿದೆ. ಕಳಪೆ ಸಾಹಿತ್ಯದ ವಿರುದ್ಧ ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ.
‘ಕೆಡಿ’ ಚಿತ್ರಕ್ಕಾಗಿ ಈಗ ಪ್ರೇಮ್ ಬರೆದಿರುವ ‘ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ದೇಶಾದ್ಯಂತ ಸಿನಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
“ಇಷ್ಟು ಕಳಪೆ ಲಿರಿಕ್ಸ್ ಇರುವ ಸಾಂಗ್ ಪ್ರೇಮ್ ಸಿನಿಮಾದಲ್ಲಿ ಇರುತ್ತದೆ ಅಂದುಕೊಂಡಿರಲಿಲ್ಲ. ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು ಎಂಬಂತಹ ಉತ್ತಮ ಹಾಡು ಬರೆದ ಪ್ರೇಮ್ ಅವರಿಂದ ಇಷ್ಟು ಕೀಳು ಮಟ್ಟದ ಸಾಹಿತ್ಯ ಬಂದಿರುವುದು ಇದೇ ಮೊದಲು..” ಎಂದೆಲ್ಲಾ ಕಾಮೆಂಟ್‌ಗಳು ಬರುತ್ತಿವೆ. ಹಿಂದಿಯಲ್ಲಿ ಹಾಡು ಕೇಳಿದ ಪ್ರೇಕ್ಷಕರು ಕೂಡ ಗರಂ ಆಗಿದ್ದಾರೆ.
ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. “ಇದು ನನ್ನ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಂಡಿತು. ನಾನು ಅದನ್ನು ಸರಿಯಾಗಿ ಕೇಳಿದ್ದೇನೆ ಎಂದು ಖಚಿತಪಡಿಸಿಕೊಳ್ಳಲು ಅದನ್ನು ಮತ್ತೆ ಪ್ಲೇ ಮಾಡಬೇಕಾಯಿತು. ಕಮರ್ಷಿಯಲ್ ಲಿರಿಕ್ಸ್ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರುವುದನ್ನು ನೋಡಲು ದುಃಖವಾಗುತ್ತಿದೆ” ಎಂದು ಹೇಳಿದ್ಧಾರೆ.






