ಸಾಂಸ್ಕೃತಿಕ

ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ ಪ್ರಶಸ್ತಿ’ಗೆ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಆಯ್ಕೆ

Views: 20

ಕನ್ನಡ ಕರಾವಳಿ ಸುದ್ದಿ: ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಇಂದ್ರಾಳಿ ಯಕ್ಷಗಾನ ಕೇಂದ್ರದ ಸಹಯೋಗದಲ್ಲಿ ನೀಡಲ್ಪಡುವ ‘ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷ ಸಾಧಕ ಪ್ರಶಸ್ತಿ’ಗೆ 2026 ಸಾಲಿನಲ್ಲಿ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 25,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಆ.1ರ ಸಂಜೆ 4ಕ್ಕೆ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

ರಾಜ್ಯದ ಅತ್ಯಂತ ಪ್ರತಿಭಾವಂತ ಮತ್ತು ಜನಪ್ರಿಯ ಸ್ತ್ರೀವೇಷಧಾರಿ ಎಂದೇ ಪ್ರಸಿದ್ಧರಾದ ಸುಬ್ರಹ್ಮಣ್ಯ ಹೆಗಡೆ ಅವರು ಹೊನ್ನಾವರ ತಾಲೂಕಿನ ಯಲಗುಪ್ಪ ವಿಷ್ಣು ಹೆಗಡೆ, ಇಂದಿರಾ ಹೆಗಡೆಯವರ ಪುತ್ರ.

ಕನ್ನಡ ಸ್ನಾತಕೋತ್ತರ ಪದವೀಧರರಾದ ಅವರ ಯಕ್ಷಗಾನ ಗುರು ಹೆರಂಜಾಲು ವೆಂಕಟರಮಣ ಗಾಣಿಗರು. ಗುಂಡಬಾಳ, ಮಂದಾರ್ತಿ, ಮಾರಣಕಟ್ಟೆ ಕಮಲಶಿಲೆ, ಸಾಲಿಗ್ರಾಮ, ಹೊಸನಗರ ಮೇಳಗಳಲ್ಲಿ ತಿರುಗಾಟ ಮಾಡಿ ಪ್ರಸ್ತುತ ಪೆರ್ಡೂರು ಮೇಳದಲ್ಲಿ ಕಲಾಸೇವೆ ಮಾಡುತ್ತಿದ್ದಾರೆ.

ಯಕ್ಷಗಾನ ಕಲೆಯನ್ನು ಹೊರ ದೇಶಗಳಲ್ಲಿಯೂ ಪಸರಿಸುವುದಕ್ಕೆ ಕಾರಣರಾಗಿದ್ದಾರೆ. ಸ್ತ್ರೀವೇಷ ನಿರ್ವಹಿ ಸುವಲ್ಲಿ ಪ್ರಸಿದ್ದರಾದ ಅವರು ಪ್ರಭಾವತಿ, ಮೇನಕೆ, ರಂಭೆ, ದಾಕ್ಷಾಯಣಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಯಕ್ಷಗಾನದಲ್ಲಿ ಹರಿವಾಣ ನೃತ್ಯ ಅವರ ವಿಶೇಷತೆಯಾಗಿದೆ ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ ಶೆಟ್ಟಿ ತಿಳಿಸಿದ್ದಾರೆ.

Related Articles

Back to top button
error: Content is protected !!