ಇತರೆ

ವಿದ್ಯುತ್ ಅವಘಡದಿಂದ ಫ್ರಿಡ್ಜ್ ಸ್ಫೋಟ: ನಾಲ್ವರು ಸಜೀವ ದಹನ

Views: 18

ಕನ್ನಡ ಕರಾವಳಿ ಸುದ್ದಿ:ಗಣೇಶ ಚತುರ್ಥಿ ಹಬ್ಬದ ಸಡಗರದಲ್ಲಿದ್ದ ಬಡ ಕುಟುಂಬದ ಬಾಳಿನಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ವಿದ್ಯುತ್ ಅವಘಡದಿಂದ ಮನೆಯಲ್ಲಿದ್ದ ಫ್ರಿಡ್ಜ್ ಸ್ಪೋಟಗೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನಪ್ಪಿದ ಘಟನೆ ಘಟನೆ ಬೆಳಗಾವಿ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಇಬ್ಬರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಘಟನೆಯಲ್ಲಿ ನಗರದ ಚವ್ಹಾಟಗಲ್ಲಿಯ ನಿವಾಸಿಗಳಾದ ಭಾರತಿ ರಾಜಾರಾಮ ದಮೋನೆ (50), ಶಾರದಾ ಗಜಾನನ ದಮೋನೆ (45), ಪ್ರಿಯಾ ಗಜಾನನ ದಮೋನೆ (28) ಹಾಗೂ ಗಂಗಾ ಗಜಾನನ ದಮೋನೆ (25) ಮೃತಪಟ್ಟ ದುರ್ದೈವಿಗಳು. ಇನ್ನೂ ಗಂಭೀರವಾಗಿ ಗಾಯಗೊಂಡ ರೋಷನ್ ದಮೋನೆ (21) ಗಜಾನನ ದಮೋನೆ (61) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಸೋಮವಾರ ಗಣೇಶ ಚತುರ್ಥಿ ಹಿನ್ನೆಲೆ ದಾಮೋನೆ ಕುಟುಂಬ ಸಂಭ್ರಮದಿಂದ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಿ ಸಡಗರದಿಂದ ಹಬ್ಬ ಆಚರಣೆ ಮಾಡಿತ್ತು. ರಾತ್ರಿ ಊಟ ಮಾಡಿ ನಿದ್ರೆ ಮಾಡುವ ವೇಳೆ ಸುಮಾರು 1:30 ಕ್ಕೆ ವಿದ್ಯುತ್ ಅವಘಡ ಸಂಭವಿಸಿದೆ.

ಈ ವೇಳೆ ಮನೆಯಲ್ಲಿದ್ದ ಪ್ರಿಡ್ಜ್ ಸ್ಫೋಟಗೊಂಡು ಚಿಕ್ಕ ತಗಡಿನ ಶೆಡ್‌ನಲ್ಲಿ ವಾಸವಿದ್ದ ಇಡೀ ಕುಟುಂಬ ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಘಟನೆ ತಿಳಿಯುತ್ತಿದ್ದಂತೆ ಮಾರ್ಕೆಟ್ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ಹೆಸ್ಕಾಂ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಆದರೆ ದುರಾದೃಷ್ಟವಶಾತ್ ಇಡೀ ಕುಟುಂಬ ಬೆಂಕಿಗೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಳಿದುಳಿದ ಇಬ್ಬರೂ ಸದಸ್ಯರು ಭಾಗಶಃ ಸುಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

 

 

Related Articles

Back to top button
error: Content is protected !!