ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಶ್ರೀಧರ್ ಭಟ್ ಕಾಸರಕೋಡ್ ಇನ್ನಿಲ್ಲ
Views: 130
ಕನ್ನಡ ಕರಾವಳಿ ಸುದ್ದಿ:ಕರಾವಳಿಯ ಜೀವನಾಡಿಯಾದ ಯಕ್ಷಗಾನ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಹಾಸ್ಯ ಶೈಲಿಯಿಂದ ಲಕ್ಷಾಂತರ ಕಲಾಪ್ರೇಮಿಗಳ ಮನಗೆದ್ದ ಖ್ಯಾತ ಹಾಸ್ಯ ಕಲಾವಿದ ಶ್ರೀಧರ್ ಭಟ್ ಕಾಸರಕೋಡ್ ಶುಕ್ರವಾರ ನಿಧನ ನಿಧನರಾದರು.ಅವರಿಗೆ 52 ವರ್ಷ ಪ್ರಾಯವಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಸಾಲ್ನೋಡ್ ಗ್ರಾಮದ ಮುಲ್ಲೆಮೆಕ್ಕಿಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಇಬ್ಬರು ಪುತ್ರರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ದಿಢೀರ್ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಣಿಪಾಲದ ಆಸ್ಪತ್ರೆಗೆ ತೆರಳುವಾಗ ದಾರಿ ಮಧ್ಯೆಯೇ ಹೃದಯಾಘಾತವಾಗಿದೆ.
ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ, ಜಲವಳ್ಳಿ, ಮೇಳದ ಹಾಸ್ಯಕಲಾವಿದರಾಗಿ ಸೇವೆ ಸಲ್ಲಿಸಿದ್ದರು.
ಮೂರುವರೆ ದಶಕಗಳಿಂದ ಯಕ್ಷ ರಂಗದಲ್ಲಿ ಮಿಂಚುತ್ತಿದ್ದರು. ಪೌರಾಣಿಕ ಪ್ರಸಂಗದ ಹಲವು ಹಾಸ್ಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಲಕ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ರುದ್ರಕೋಪ ಪ್ರಸಂಗದ ಅಜ್ಜಿ, ವಿವಿಧ ಪ್ರಸಂಗಗಳ ದೂತನ ಪಾತ್ರಗಳು, ವಿವಿಧ ಪ್ರಸಂಗಗಳ ಬ್ರಾಹ್ಮಣ ಪಾತ್ರಗಳು ಶ್ರೀಧರ್ ಭಟ್ ಅವರಿಗೆ ಖ್ಯಾತ ತಂದಿದ್ದವು. ಎಲ್ಲ ರೀತಿಯ ಹಾಸ್ಯ ಪಾತ್ರಗಳಿಗೆ ತನ್ನೆದೇ ಆದೆ ವಿಭಿನ್ನ ಶೈಲಿಯಲ್ಲಿ, ಯಕ್ಷಗಾನ ರಂಗದ ಚೌಕಟ್ಟೆಗೆ ಚ್ಯುತಿಯಾಗದಂತೆ ಪಾತ್ರ ಪೋಷಣೆ ಮಾಡುತ್ತಿದ್ದರು.
ಅಗಲಿದ ಚೇತನಕ್ಕೆ ಕಲಾಭಿಮಾನಿಗಳು ಮತ್ತು ಯಕ್ಷಗಾನ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ.






