ಸಾಂಸ್ಕೃತಿಕ

ಉಪೇಂದ್ರ ಸಿನಿಮಾ ಉಪ್ಪಿದಾದಾ MBBS ನಲ್ಲಿ ನಟಿಸಿದ್ದ ಖ್ಯಾತ ನಟಿಗೆ ಕ್ಯಾನ್ಸರ್

Views: 40

ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಭಾರತದ ಹಿರಿಯ ನಟಿ ಸುಮಿತ್ರಾ ಅವರ ಪುತ್ರಿ ನಟಿ ಉಮಾಶಂಕರಿ ತಮ್ಮ ಆರೋಗ್ಯದ ಬಗ್ಗೆ ನೀಡಿರುವ ಮಾಹಿತಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಕಳೆದ ಎರಡು ದಶಕಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಉಮಾಶಂಕರಿ, ತಾವು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ.

ಸುಮಿತ್ರಾ ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೇರಳದಲ್ಲಿ ಜನಿಸಿದ ಸುಮಿತ್ರಾ, ತಂದೆ ರಾಘವ ನಾಯರ್ ಮತ್ತು ತಾಯಿ ಜಾನಕಿ ಅವರ ಪುತ್ರಿಯಾಗಿದ್ದಾರೆ.

ಕನ್ನಡದ ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರನ್ನು ಸುಮಿತ್ರಾ ವಿವಾಹವಾಗಿದ್ದರು. ಈ ದಂಪತಿಗೆ ಉಮಾಶಂಕರಿ ಮತ್ತು ನಕ್ಷತ್ರ ಎಂಬ ಇಬ್ಬರು ಪುತ್ರಿಯರಿದ್ದಾರೆ. ಇಬ್ಬರೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಹಿರಿಯ ಪುತ್ರಿ ಉಮಾಶಂಕರಿ ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ಸುಮಾರು 19ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ನಿರ್ದೇಶಕ ಸೀಮನ್ ಪರಿಚಯಿಸಿದ ವೀರಣದೈ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದರು.

ತಮಿಳಿನ ಜೊತೆಗೆ ಮಲಯಾಳಂನ ಕುಬೇರನ್ ಹಾಗೂ ಕನ್ನಡದ ಉಪ್ಪಿದಾದಾ MBBS, ಕಲ್ಲರಳಿ ಹೂವಾಗಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಉಮಾಶಂಕರಿ ಅಭಿನಯಿಸಿದರು. ಅವರ ಸಹಜ ಅಭಿನಯಕ್ಕೆ ಉತ್ತಮ ಮೆಚ್ಚುಗೆಯೂ ದೊರೆಯಿತು. ಆದರೆ ಕೆಲ ವರ್ಷಗಳ ಬಳಿಕ ಸಿನಿಮಾ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಅವರು ಕಿರುತೆರೆಯತ್ತ ಮುಖ ಮಾಡಿದರು. ಜನಪ್ರಿಯ ಧಾರಾವಾಹಿಗಳಲ್ಲೂ ಅಭಿನಯಿಸಿ ತಮ್ಮ ನಟನಾ ಪಯಣ ಮುಂದುವರಿಸಿದರು.

Related Articles

Back to top button
error: Content is protected !!