ರಿಷಬ್ ಶೆಟ್ಟಿ18ನೇ ಶತಮಾನದ ಕಥೆ.. ಭಾರೀ ಬಜೆಟ್ ಸಿನಿಮಾ ಸಂಭಾವನೆ ವಿಚಾರದಲ್ಲಿ ಹೊಂದಾಣಿಕೆ ಆಗಲಿಲ್ಲವೆ?
Views: 23
ಕನ್ನಡ ಕರಾವಳಿ ಸುದ್ದಿ: ‘ಕಾಂತಾರ’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಸತತವಾಗಿ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಿಸಿದ್ದರು. ಅದರಲ್ಲಿ ವಿಶೇಷವಾಗಿ 18ನೇ ಶತಮಾನದ ಹಿನ್ನೆಲೆಯ ಐತಿಹಾಸಿಕ ಸಿನಿಮಾ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಇದೀಗ ಆ ಸಿನಿಮಾ ನಿಂತು ಹೋಗಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕಾಂತಾರ ಬಳಿಕ ರಿಷಬ್ ಶೆಟ್ಟಿ ಕೈಗೆತ್ತಿಕೊಳ್ಳಲಿದ್ದ ಈ ಐತಿಹಾಸಿಕ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಬೇಕಿತ್ತು.18ನೇ ಶತಮಾನದ ಕರ್ನಾಟಕದ ಹಿನ್ನೆಲೆಯ ಕಥೆಯನ್ನು ಆಧರಿಸಿ ಸಿನಿಮಾ ಮೂಡಿ ಬರಲಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಜನೆ ಇತ್ತು ಎನ್ನಲಾಗಿತ್ತು.
ಸಿನಿಮಾ ನಿಲ್ಲಲು ಪ್ರಮುಖ ಕಾರಣವಾಗಿ ರಿಷಬ್ ಶೆಟ್ಟಿ ಸಂಭಾವನೆ ವಿಚಾರವೇ ಕೇಳಿಬರುತ್ತಿದೆ. ‘ಕಾಂತಾರ’ ಯಶಸ್ಸಿನ ನಂತರ ರಿಷಬ್ ಅವರ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಅವರು ಕೇಳಿದ ಸಂಭಾವನೆ ಮತ್ತು ನಿರ್ಮಾಪಕರ ಬಜೆಟ್ ನಡುವೆ ಹೊಂದಾಣಿಕೆ ಆಗದ ಕಾರಣ ಸಿನಿಮಾ ಮುಂದುವರಿಯಲಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ.
ಸದ್ಯ ಸಾಮಾಜಿಕ ಜಾಲತಾಣಗಳು ಹಾಗೂ ಸಿನಿ ವಲಯದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದರೂ, ಸಿನಿಮಾ ಅಧಿಕೃತವಾಗಿ ರದ್ದಾಗಿದೆ ಎಂಬ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಹೀಗಾಗಿ ಇದನ್ನು ಸದ್ಯಕ್ಕೆ ಅನಧಿಕೃತ ವರದಿ ಎಂದೇ ಪರಿಗಣಿಸಲಾಗುತ್ತಿದೆ.






