ಪ್ರಿಯಕರನೊಂದಿಗೆ ಲಾಡ್ಜ್‌ನಲ್ಲಿ ರೆಡ್ ಹ್ಯಾಂಡ್ ಹಿಡಿದ ಪತಿ
Views: 200
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನೊಂದಿಗೆ ಲಾಡ್ಜ್‌ನಲ್ಲಿದ್ದ ಪತ್ನಿಯನ್ನು ಪತಿಯೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಅಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ಪತಿಯ ವಿರುದ್ಧವೇ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾಳೆ.

ಹೊಟೆಲ್‌ನಲ್ಲಿರುವಾಗಲೇ ಹಿಡಿದಾಗ ಮಖ ಮುಚ್ಕೊಂಡು ಹೊರಗೆ ಬಂದಿದ್ದಾಳೆ. ಪೊಲೀಸರ ಜೊತೆಯಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರೀತಿಸಿ ಮದುವೆಯಾದ್ರೂ ಅಕ್ರಮ ಸಂಬಂಧ ಮೂರುವರೆ ವರ್ಷಗಳ ಹಿಂದೆ ಬುಲಂದ್‌ಶಹರ್ ಜಿಲ್ಲೆಯ ಗಲಾವಟಿ ನಿವಾಸಿ ಆಕಾಶ್ ಕುಮಾರ್ ಮದುವೆ ಮಹಿಮಾರಾಣಿ ಜೊತೆಯಲ್ಲಿ ನಡೆದಿತ್ತು. ಆಕಾಶ್‌ನನ್ನು ಪ್ರೀತಿಸಿ ಮದುವೆಯಾದ್ರೂ ನಿಖಿಲ್ ಎಂಬಾತನೊಂದಿಗೆ ಮಹಿಮಾರಾಣಿ ಅಕ್ರಮ ಸಂಬಂಧ ಹೊಂದಿದ್ದಳು. ಈ ಹಿಂದೆ ಅನುಮಾನದಿಂದ ಪ್ರಶ್ನೆ ಮಾಡಿದಾಗ ಗಂಡ ಆಕಾಶ್ ಮೇಲೆ ಆಣೆ ಪ್ರಮಾಣ ಮಾಡಿದ್ದಳು. ತಿಂಗಳ ಹಿಂದಯಷ್ಟೇ ಗಂಡನ ವಿರುದ್ದ ವರದಕ್ಷಿಣೆ ಆರೋಪ ಮಾಡಿದ್ದಳು.
ಇವತ್ತು ಅಲಿಗಢನಲ್ಲಿರುವ ಸೋದರಿ ಬಳಿ ಬಂದಿದ್ದೆ. ನಗರದಲ್ಲಿ ಸುತ್ತಾಡುವಾಗ ನಿಖಿಲ್ ಜೊತೆ ಪತ್ನಿ ಮಹಿಮಾರಾಣಿ ಕಾಣಿಸಿಕೊಂಡಳು. ಅವರಿಬ್ಬರಿಗೂ ತಿಳಿಯದಂತೆ ನಾನು ಹಿಂಬಾಲಿಸಿಕೊಂಡು ಬಂದೆ. ಇಬ್ಬರು ಹೋಟೆಲ್‌ಗೆ ಬಂದು ಆಧಾರ್ ಕಾರ್ಡ್ ನೀಡಿ ಕೋಣೆಯೊಂದನ್ನು ಪಡೆದುಕೊಂಡರು. ನಾನು ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ ಎಂದು ಅಕಾಶ್ ಕುಮಾರ್ ಹೇಳಿದ್ದಾರೆ.
ಮುಂದುವರಿದು ಮಾತನಾಡಿರುವ ಆಕಾಶ್ ಕುಮಾರ್, ಇಬ್ಬರು ಕೋಣೆ ಸಂಖ್ಯೆ 303ರೊಳಗೆ ಹೋದರು. ಹೋಟೆಲ್‌ಗೆ ಬಂದ ಪೊಲೀಸರಿಗೆ ವಿಷಯ ತಿಳಿಸಿದಾಗ ಅವರು ಮತ್ತೋರ್ವ ಹಿರಿಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿದರು. ನಂತರ ನಾವೆಲ್ಲರೂ ಕೋಣೆಗೆ ಹೋದಾಗ ಇಬ್ಬರು ಹೊರಗೆ ಬಂದರು. ನಿಖಿಲ್ ಬಟ್ಟೆ ಹಾಕಿಕೊಂಡು ಬಂದಿದ್ದಾನೆ. ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ನಿಖಿಲ್ ಜೊತೆ ಹೊಸ ಜೀವನ ಕಟ್ಟಿಕೊಳ್ಳಲು ಪತ್ನಿ ಪ್ಲಾನ್ ಮಾಡಿದ್ದಳು ಎಂಬ ವಿಚಾರವನ್ನು ಆಕಾಶ್ ಕುಮಾರ್ ಹಂಚಿಕೊಂಡಿದ್ದಾರೆ.
ಮನೆಯಲ್ಲಿದ್ದಾಗಲೂ ನಿಖಿಲ್ ಜೊತೆಗಿನ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ನನ್ನ ಮೇಲೆ ಆಣೆ ಪ್ರಮಾಣ ಮಾಡಿದ್ದಳು. ನೀನೇ ನನ್ನ ಚಿನ್ನ ರನ್ನ ಅಂತೇಳಿ ಯಾವುದೇ ಅಕ್ರಮ ಸಂಬಂಧವಿಲ್ಲ ಎಂದಿದ್ದಳು. ಮದುವೆಯಲ್ಲಿ 5 ಲಕ್ಷ ವರದಕ್ಷಿಣೆ ನೀಡಿ 15 ಲಕ್ಷ ವೆಚ್ಚದಲ್ಲಿ ಮದುವೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದ್ದಾಳೆ. ನನಗೆ ಯಾವುದೇ ಹಣವನ್ನೂ ನೀಡಿಲ್ಲ. ನಮ್ಮಿಬ್ಬರದ್ದು ಲವ್ ಮ್ಯಾರೇಜ್ ಎಂದು ಆಕಾಶ್ ಹೇಳಿದ್ದಾರೆ.






