ಜನಮನ
ಯಶವಂತಪುರ – ಕಾರವಾರ ರೈಲಿನ ಸಮಯ ಬದಲಾವಣೆ
Views: 48
ಕನ್ನಡ ಕರಾವಳಿ ಸುದ್ದಿ: ಮಂಗಳೂರು, ಯಶವಂತಪುರ ಜಂಕ್ಷನ್-ಕಾರವಾರ ಟ್ರೈ ವೀಕ್ಲಿ ಎಕ್ಸ್ ಪ್ರೆಸ್ (16515) ರೈಲಿನ ಸಂಚಾರ ಸಮಯ ಬದಲಾವಣೆಯಾಗಿದೆ. ಈ ರೈಲು ಕಾರವಾರದಿಂದ ಪ್ರಸ್ತುತ ರಾತ್ರಿ 10.45ಕ್ಕೆ ಹೊರಡುತ್ತಿತ್ತು. ಮಾ.18ರಿಂದ ರಾತ್ರಿ 11ಕ್ಕೆ ಹೊರಡಲಿದೆ.
ಮೆಮು ರೈಲಿನ ಸಮಯ ಬದಲಾವಣೆ: ಮಂಗಳೂರು ಸೆಂಟ್ರಲ್ – ಮಡ್ಡಾಂವ್ ನಡುವೆ ಸಂಚರಿಸುವ ಮೆಮು ಎಕ್ಸ್‌ಪ್ರೆಸ್ ರೈಲಿನ ಸಂಚಾರದ ಸಮಯ ಬದಲಾವಣೆಯಾಗಿದೆ. ಈ ರೈಲು (10108) ಪ್ರಸ್ತುತ ಮಡ್ತಾಂವ್ ಜಂಕ್ಷನ್ ನಿಂದ ರಾತ್ರಿ 10.20ಕ್ಕೆ ಹೊರಡುತ್ತಿತ್ತು. ಮಾ.18ರಿಂದ ರಾತ್ರಿ 10.35ಕ್ಕೆ ಹೊರಡಲಿದೆ ಎಂದು ದಕ್ಷಿಣ ರೈಲ್ವೇ ಪ್ರಕಟಣೆ ತಿಳಿಸಿದೆ.






