ಯುವಜನ
ಬ್ರಹ್ಮಾವರ: ಕೊಕ್ಕರ್ಣೆಯಲ್ಲಿ ಪಾಗಲ್ ಪ್ರೇಮಿಯಿಂದ ಯುವತಿಯ ಬರ್ಬರ ಹತ್ಯೆ

Views: 515
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣೆಯಲ್ಲಿ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಭೀಕರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದಿದೆ.
ಹತ್ಯೆಯಾದ ಯುವತಿಯನ್ನು ಕೊಕ್ಕರ್ಣೆ ಪೂಜಾರಿಬೆಟ್ಟು ನಿವಾಸಿ ರಕ್ಷಿತಾ (20) ಎಂದು ತಿಳಿಯಲಾಗಿದೆ.
ರಕ್ಷಿತಾ ಎಂದಿನಂತೆ ಮಣಿಪಾಲದಲ್ಲಿ ಕೆಲಸಕ್ಕೆ ಹೋಗಲೆಂದು ಮನೆಯಿಂದ ಬರುವಾಗ ಪಾಗಲ್ ಪ್ರೇಮಿ ಕಾರ್ತಿಕ್ ಪೂಜಾರಿ ಬೈಕಿನಲ್ಲಿ ಬಂದು ಏಕಾಏಕಿ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.
ಯುವತಿಯನ್ನು ಹತ್ಯೆಗೈದ ಯುವಕ ಬೈಕ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಾಗಿದೆ. ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.