ಯುವಜನ

ಐದು ವರ್ಷದ ಪ್ರೀತಿ.. ಮದುವೆಯನ್ನು ಪದೇ ಪದೆ ಮುಂದೂಡಿದ ಯುವಕ,ದುರಂತ ಅಂತ್ಯಕಂಡ ಯುವತಿ

Views: 172

ಕನ್ನಡ ಕರಾವಳಿ ಸುದ್ದಿ: ಐದು ವರ್ಷದ ಪ್ರೀತಿಗೆ ಬ್ರೇಕ್ ಅಪ್ ಆದ ಹಿನ್ನೆಲೆಯಲ್ಲಿ 25 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಲತಾ ಜೀವ ತೆಗೆದುಕೊಂಡ ಯುವತಿ. ಲತಾ ಕಳೆದ ಐದು ವರ್ಷಗಳಿಂದ ರಂಜಿತ್ ಎಂಬಾತನ ಪ್ರೀತಿಸಿದ್ದಳು.ದುರಂತ ಅಂತ್ಯಕಂಡ ಯುವತ

ಏನಿದು ಪ್ರಕರಣ..?

ಇಬ್ಬರೂ ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು ರಂಜಿತ್ ಎಲೆಕ್ಟಿಷನ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಲತಾ ಖಾಸಗಿ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದ.

ಇವರಿಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಕೂಡ ಸಿಕ್ಕಿತ್ತು. ಆದರೆ ರಂಜಿತ್ ಇತೀಚೆಗೆ…ಮದ್ವೆ ವಿಚಾರವನ್ನು ಪದೇ ಪದೆ ಮುಂದೂಡುತ್ತಿದ್ದ. ಆತನ ವರ್ತನೆಯಲ್ಲಿ ಲತಾ ಬದಲಾವಣೆ ಕಂಡು ಆತಂಕಗೊಂಡಿದ್ದಳು. ಅಲ್ಲದೇ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ ಆಗ್ತಿತ್ತು.

ನಿನ್ನೆ ಕೂಡ ಇಬ್ಬರ ನಡುವೆ ವಿಪರೀತ ಗಲಾಟೆಯಾಗಿದೆ. ಇದ್ರಿಂದ ಮನನೊಂದ ಲತಾ ಬೆಂಗಳೂರಿನ ರಾಜಾಜಿ ನಗರದನ ಸಮೀಪದಲ್ಲಿರುವ ಗಾಯಿತ್ರಿ ನಗರದ ಬಾಡಿಗೆ ಮನೆಯ ಫ್ಯಾನಿಗೆ ನೇಣುಬಿಗಿದುಕೊಂಡು ದುರಂತ ಅಂತ್ಯ ಕಂಡಿದ್ದಾಳೆ. ಸ್ಥಳಕ್ಕೆ ಸುಬ್ರಮಣ್ಯ ನಗರ ಠಾಣೆ ಪೊಲೀಸರು ಭೇಟಿ…ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button