ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿನಿ ನಾಪತ್ತೆ

Views: 158
ಕನ್ನಡ ಕರಾವಳಿ ಸುದ್ದಿ: ಕಾಟಿಪಳ್ಳ ಗ್ರಾಮದ ಗಣೇಶಕಟ್ಟೆ ನಿವಾಸಿ ಪ್ರಜ್ಞಾ (18) ಎಂಬ ವಿದ್ಯಾರ್ಥಿನಿ ಕಾಲೇಜಿಗೆಂದು ಹೋಗಿದ್ದು, ನಾಪತ್ತೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲೋಶಿಸಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿನಿಯಾಗಿದ್ದು, ಸೆ.1 ರಂದು ಕಾಲೇಜು ಸಮವಸ್ತ್ರ ಧರಿಸಿ ಕಾಲೇಜಿಗೆ ಹೋಗಿದ್ದು, ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದಾಳೆ.
ಸಂಜೆಯಾದರೂ ಮನೆಗೆ ಬಾರದೇ ಹೋದಾಗ ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ನಂತರ ಆಕೆಯ ಸ್ನೇಹಿತೆಯಲ್ಲಿ ವಿಚಾರಣೆ ಮಾಡಿದಾಗ ಆಕೆ ಕಾಲೇಜಿಗೆ ಬಂದಿಲ್ಲ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜ್ಞಾ ರಾತ್ರಿಯಾದರೂ ಮನೆಗೆ ಬಾರದೇ ಹೋದಾಗ ಠಾಣೆಗೆ ದೂರನ್ನು ನೀಡಲಾಗಿದೆ.
5.3 ಅಡಿ ಎತ್ತರದ ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈ ಬಣ್ಣ, ಕಪ್ಪು ಕೂದಲು, ಕನ್ನಡ, ತುಳು, ಇಂಗ್ಲೀಷ್ ಭಾಷೆ ಮಾತನಾಡುವುದು. ಕಾಣೆಗೊಂಡ ದಿನ ನೀಲಿ ಬಣ್ಣದ ಅರ್ಧ ತೋಳಿನ ಕಾಲೇಜು ಸಮವಸ್ತ್ರ ಶರ್ಟ್ ಹಾಗೂ ಕಪ್ಪು ಬಣ್ಣದ ಕಾಲೇಜು ಸಮವಸ್ತ್ರ, ಪ್ಯಾಂಟ್ ಧರಿಸಿರುವುದಾಗಿ ಹೇಳಲಾಗಿದೆ.
ಕಾಣೆಯಾದವರ ಗುರುತು ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.