ಯುವಜನ

ಕುಂದಾಪುರ:ಹಂಗಳೂರಿನಲ್ಲಿ ಯುವಕ ಬಾವಿಗೆ ಹಾರಿ ಆತ್ಮಹತ್ಯೆ 

Views: 508

ಕುಂದಾಪುರ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಂಗಳೂರಿನಲ್ಲಿ ಆಗಸ್ಟ್ 28 ರಂದು ನಡೆದಿದೆ.

ಮೃತ ಯುವಕನನ್ನು ಹಂಗಳೂರು ಗ್ರಾಮದ ಶ್ರೀಧರ ಎಂಬವರ ಮಗ 28 ವರ್ಷ ಪ್ರಾಯದ ಶ್ರೀಷ ಎಂದು ಗುರುತಿಸಲಾಗಿದೆ.

ಶ್ರೀಷ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮುಗಿಸಿ ಹಟ್ಟಿಯಂಗಡಿ ಸಿದ್ದಿವಿನಾಯಕ ಶಾಲೆಯಲ್ಲಿ ಕೆಲಸಮಾಡುತ್ತಿದ್ದವರು ಒಂದು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸುತ್ತಿದ್ದು ಒಂದು ವರ್ಷದ ಹಿಂದೆ ಶಾಸ್ರ್ತಿ ಪಾರ್ಕ್‌ ಸಮೀಪ ಪ್ಲೈ ಒವರ್‌ ಮೇಲಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಕೆಳಗೆ ಹಾರಿ ಕೈಕಾಲು ಪೆಟ್ಟಾಗಿದ್ದು ಚಿಕಿತ್ಸೆ ಕೊಡಿಸಿ ಗುಣಮುಖವಾಗಿರುತ್ತದೆ.

ಆಗಸ್ಟ್ 28ರಂದು ವಿಪರೀತ ಮಳೆ ಕಾರಣ ಶಾಲಾ ಕಾಲೇಜು ರಜೆ ಇರುವುದರಿಂದ ಮನೆಯಲ್ಲಿಯೇ ಇದ್ದು ಮಧ್ಯಾಹ್ನ 1:30 ಗಂಟೆಗೆ ಊಟ ಬಡಿಸಲು ಕರೆದಾಗ ಏಲ್ಲಿಯೋ ಕಾಣದೇ ಇದ್ದು ಮನೆಯ ಬಾವಿ ನೋಡಿದಾಗ ಬಾವಿಯಲ್ಲಿ ಶವ ಪತ್ತೆಯಾಗಿದೆ. ಕೂಡಲೇ ತಂದೆ ಬೇಕರಿಯಿಂದ ಮನೆಗೆ ಹೋಗಿ ಮಗನನ್ನು ಮೇಲೆತ್ತಿದ್ದಾಗ ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button