ಯುವಜನ

ರೀಲ್ಸ್ ಮಾಡಲು ಹೋಗಿ ಟ್ರ್ಯಾಕ್ಟರ್ ಪಲ್ಟಿ, ಪಿಯುಸಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

Views: 90

ಕನ್ನಡ ಕರಾವಳಿ ಸುದ್ದಿ: ಯುವಕನೊಬ್ಬ ರೀಲ್ಸ್ ಮಾಡುವುದಕ್ಕೆಂದು ಕಡಿದಾದ ಇಳಿಜಾರಿನ ತಿರುವಿನಲ್ಲಿ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿದ ಪರಿಣಾಮ ಅದು ಪಲ್ಟಿಯಾಗಿ ಅದರಡಿ ಸಿಲುಕಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಬ್ಬಳ್ಳಿಗೆರೆ ಗ್ರಾಮದಲ್ಲಿ ನಡೆದಿದೆ.

ವಿ.ಜಿ.ಕೊಪ್ಪಲು ಗ್ರಾಮದ ಕಿರಣ್ (19) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ದ್ವಿತೀಯ ಪಿ.ಯು. ವಿದ್ಯಾರ್ಥಿ ಬುಧವಾರ ಆತ ಸ್ನೇಹಿತರೊಂದಿಗೆ ಟ್ರ್ಯಾಕ್ಟರನ್ನು ವೇಗವಾಗಿ ಚಲಾಯಿಸುತ್ತ, ”ಕೆಂಚಾಲೋ, ಮಂಚಾಲೋ…’ ಹಾಡಿಗೆ ರೀಲ್ಸ್ ಮಾಡುತ್ತಿದ್ದ ಟ್ರ್ಯಾಕ್ಟ‌ರ್ ರಸ್ತೆಯ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಿರಣ್ ಅದರಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಿರಣನನ್ನು ಉಳಿಸಲು ಆತನ ಸ್ನೇಹಿತರು ಹರಸಾಹಸ ಪಡುತ್ತಿದ್ದಾಗಲೂ ‘ಕೆಂಚಾಲೋ, ಮಂಚಾಲೋ…’ ಹಾಡು ಕೇಳಿಸುತ್ತಲೇ ಇರುವ ವಿಡಿಯೋ ವೈರಲ್ ಆಗಿದೆ.

 

 

Related Articles

Back to top button