ಸಾಂಸ್ಕೃತಿಕ

ಸಿದ್ಧಿ ಸೀವಿಂಗ್ ಸ್ಕೂಲ್ (Siddhi Sewing school)ನಲ್ಲಿ ಸುಧಾರಿತ ಆರಿ ವರ್ಕ್ ಮತ್ತು ಸೀರೆಗೆ ಕುಚ್ಚು ಕಟ್ಟುವ ಸ್ವಉದ್ಯೋಗ ತರಬೇತಿ

Views: 177

ಕನ್ನಡ ಕರಾವಳಿ ಸುದ್ದಿ: ಭಾರತೀಯ ವಿಕಾಸ್ ಟ್ರಸ್ಟ್ ಮಣಿಪಾಲ, ಬ್ಯಾಂಕ್ ಆಫ್ ಬರೋಡ –ಉಡುಪಿ ಹಾಗೂ ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ) ಮಂಗಳೂರು ಸಹಯೋಗದಲ್ಲಿ ಉಡುಪಿಯ siddhi sewing school ನಲ್ಲಿ ಸುಧಾರಿತ ಆರಿ ವರ್ಕ್ ಮತ್ತು ಸೀರೆಗೆ ಕುಚ್ಚು ಕಟ್ಟುವ ಸ್ವ ಉದ್ಯೋಗ ತರಬೇತಿಯನ್ನು ಆಯೋಜಿಜಿಸಲಾಗಿತ್ತು. ದಿನಾಂಕ 24/07/2025 ರಂದು ಪ್ರಾರಂಭ ಗೊಂಡ ಈ ತರಬೇತಿಯು ದಿನಾಂಕ 06/08/2025 ರಂದು ಸಮಾಪನಗೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಗದೀಶ್ ಪೈ, ಮುಖ್ಯ ಸಲಹೆಗಾರರು, ಭಾರತೀಯ ವಿಕಾಸ್ ಟ್ರಸ್ಟ್ ಮಣಿಪಾಲ ಇವರು ವಹಿಸಿದ್ದರು. ನಿಮ್ಮ ಮುಂದಿನ ಯೋಜನೆಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು, ಜ್ಯೋತಿರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿಜಯ ಗ್ರಾಮೀಣ ಪ್ರತಿಷ್ಟಾನ (ರಿ), ಮಂಗಳೂರು, ರಾಜೇಂದ್ರ ರೈ ( ಕಾರ್ಯದರ್ಶಿಗಳು ವಿಜಯ ಗ್ರಾಮೀಣ ಪ್ರತಿಷ್ಠಾನ ರಿಜಿಸ್ಟರ್ಡ್ ಮಂಗಳೂರು) ಶ್ರೀ ಸಿ. ಕೆ. ಶರ್ಮ, RBDM, ಬ್ಯಾಂಕ್ ಆಫ್ ಬರೋಡ ಉಡುಪಿ ಇವರು ಸ್ವ ಉದ್ಯೋಗದ ಬಗ್ಗೆ ತಿಳಿಸುತ್ತಾ ಬ್ಯಾಂಕ್ ನಿಂದ ದೊರಕುವ ಸವಲತ್ತುಗಳು, ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.

ಶ್ರೀಮತಿ ಲಕ್ಷ್ಮೀಬಾಯಿ, ಭಾರತೀಯ ವಿಕಾಸ್ ಟ್ರಸ್ಟ್ ನ ನಿವೃತ್ತ ಕಾರ್ಯಕ್ರಮ ಸಂಯೋಜಕಿ ಮತ್ತು ಶ್ರೀಮತಿ ದೀಪ(DHEW)ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರುಗಳು ಸಂದರ್ಭೋಚಿತವಾಗಿ ಸೂಕ್ತ ಸಲಹೆ ಮಾರ್ಗದರ್ಶನವಿತ್ತರು. ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಪ್ರಶಿಕ್ಷಣಾರ್ಥಿಗಳಾದ ನವ್ಯ, ಶ್ರೀವಿದ್ಯಾ, ಸುಶ್ಮಿತಾ, ದೀಕ್ಷಿತ, ಶ್ರೀನಿಧಿ, ಅಕ್ಷಿತಾ ವಿ. ರಾವ್ ಇಂತಹ ಮಾರ್ಗದರ್ಶನಗಳು ನಮ್ಮ ಭವಿಷ್ಯದಲ್ಲಿ ಸ್ವ ಉದ್ಯೋಗವನ್ನು ಪ್ರಾರಂಭಿಸಲು ಉತ್ತಮ ಕೌಶಲ್ಯವನ್ನು ಕಲ್ಪಿಸಿದೆ ಎಂದು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತರಬೇತುದಾರರಾಗಿ ರಮ್ಯಾ ರಾಜೇಶ್ ಶೆಟ್ಟಿಗಾರ್ (ಮೊಬೈಲ್‌ 8892876163) ಆರಿ ವರ್ಕ್ ಮತ್ತು ಸೀರೆಗೆ ವಿವಿಧ ಮಾದರಿಯ ಕುಚ್ಚು ಕಟ್ಟುವ ತರಬೇತಿ ನೀಡಿದುದಲ್ಲದೆ, ವಿವಿಧ ಡಿಸೈನ್ ಗಳ ಬಗ್ಗೆ ತಿಳಿಸಿಕೊಟ್ಟರು. ಹಾಗೂ ಮಧು ಶೆಟ್ಟಿಗಾರ್ ಇವರು ವ್ಯಕ್ತಿತ್ವ ವಿಕಸನ ಮತ್ತು ವಿಡಿಯೋ making ಬಗ್ಗೆ ತಿಳಿಸಿಕೊಟ್ಟರು. ಅಲ್ಲದೆ siddhi sewing school ನಲ್ಲಿ ನೀಡಲಾಗುವ ಬೇಸಿಕ್ ಆರಿ ವರ್ಕ್, ಅಡ್ವಾನ್ಸ್ ಆರಿ ವರ್ಕ್, ಸೀರೆಗೆ ಕುಚ್ಚು ಕಟ್ಟುವ ತರಬೇತಿ, ಕ್ರೋಚೆಟ್ ಕುಚ್ಚು, ಫ್ಯಾಬ್ರಿಕ್ ಪೇಂಟಿಂಗ್, ಸೀರೆ ಪ್ರೀ ಪ್ಲೀಟಿಂಗ್ ಇತ್ಯಾದಿ ತರಬೇತಿಯ ಬಗ್ಗೆ ತಿಳಿಸಿಕೊಟ್ಟರು.

ಪ್ರಶಿಕ್ಷಣಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಿಗೆ ಗುರುವಂದನೆಗಳನ್ನು ಸಲ್ಲಿಸಿದರು ಹಾಗೂ ಕಾರ್ಯಕ್ರಮದ ಕೊನೆಯ ಭಾಗವಾಗಿ ಅತಿಥಿಗಳು ಹಾಗೂ ವಿದ್ಯಾರ್ಥಿಗಳು ಉಡುಪಿಯ ಸಾಂಪ್ರದಾಯಿಕ ಸಹಭೋಜನವನ್ನು ಸ್ವೀಕರಿಸಿದರು.

ಕು| ನವ್ಯ, ಕು| ದೀಕ್ಷಿತ, ಕು| ಶ್ರೀನಿಧಿ ಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಶ್ರೀಮತಿ ರೇಣುಕಾ ಸರ್ವರನ್ನೂ ಸ್ವಾಗತಿಸಿದರು. ಶ್ರೀಮತಿ ಮಧು ಶೆಟ್ಟಿಗಾರ್ ನಿರೂಪಿಸಿ, ಕೊನೆಯಲ್ಲಿ ಶ್ರೀಮತಿ ರಮ್ಯಾ ರಾಜೇಶ್ ಶೆಟ್ಟಿಗಾರ್ ಧನ್ಯವಾದ ಸಮರ್ಪಿಸಿದರು.

  —-ವರದಿ: ಬಿ.ವಿ.ಶೆಟ್ಟಿಗಾರ್‌, ಉಡುಪಿ

Related Articles

Back to top button
error: Content is protected !!