ತಂದೆಯ ಕಣ್ತಪ್ಪಿಸಿ ಕೇರಳದಲ್ಲಿ ಮದುವೆಯಾದ ಕುಂಭಮೇಳದ ಬೆಡಗಿ ಮೊನಾಲಿಸಾ
Views: 73
ಕನ್ನಡ ಕರಾವಳಿ ಸುದ್ದಿ: ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಯನ್ನು ಮಾರುತ್ತಾ ಕುಳಿತಿದ್ದ ಹುಡುಗಿ ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಳು. ಇಡೀ ದೇಶವೇ ಈಕೆಯ ಕಣ್ಣುಗಳಿಗೆ ಫಿದಾ ಆಗಿದ್ದರು. ಇಲ್ಲಿಂದ ಈಕೆ ಮೊನಾಲಿಸಾ ಅಂತಲೇ ಜನಪ್ರಿಯತೆ ಪಡೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗುತ್ತಿದ್ದಂತೆ ಸಿನಿಮಾಗಳಲ್ಲಿಯೂ ನಟಿಸುವ ಅವಕಾಶ ಬಂದಿತ್ತು. ಇದರ ಜೊತೆ ಒಂದಿಷ್ಟು ವಿವಾದವನ್ನು ಮೈಮೇಲೆ ಎಳೆದುಕೊಂಡು ಟೀಕೆಗಳಿಗೆ ಗುರಿಯಾಗಿದ್ದರು. ಇತ್ತೀಚೆಗೆ ಸೈಲೆಂಟ್ ಆಗಿದ್ದ ಮೊನಾಲಿಸಾ ಮತ್ತೆ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ. ಕೇರಳದಲ್ಲಿ ತನ್ನ ಬಾಯ್‌ಫ್ರೆಂಡ್ ಜೊತೆ ವಿವಾಹವಾಗುವ ಮೂಲಕ ಆಕೆಯ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾಳೆ.

ಮೊನಾಲಿಸಾ ಮೂಲತ: ಮಧ್ಯಪ್ರದೇಶದ ಇಂದೋರ್‌ನವರು. ಇನ್ನು ಈಕೆಯ ಬಾಯ್‌ಫ್ರೆಂಡ್ ಮಹಾರಾಷ್ಟ್ರದವರು. ಇಬ್ಬರೂ ಕೇರಳದಲ್ಲಿ ಯಾಕೆ ಮದುವೆಯಾದರು? ಈ ಪ್ರಶ್ನೆ ಸಹಜವಾಗಿಯೂ ಮೂಡುತ್ತೆ. ಅದಕ್ಕೊಂದು ಬಲವಾದ ಕಾರಣವಿದೆ. ಮದುವೆ ಬಳಿಕ ಮೊನಾಲಿಸಾ ಬಾಯ್‌ಫ್ರೆಂಡ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮಹಾರಾಷ್ಟ್ರದ ಮುಹಮ್ಮದ್ ಫರ್ಮಾನ್ ಎಂಬುವವರನ್ನು ಮಾರ್ಚ್ 11 ವಿವಾಹವಾಗಿದ್ದಾರೆ. ವಿಶೇಷ ಅಂದರೆ, ಈ ಜೋಡಿ ಸೀದಾ ಕೇರಳದ ಪೂವಾರ್ ಬಳಿಯ ಅರುಮನೂರ್ ನೈನಾರ್ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಗೆ ಕೇರಳ ಗಣ್ಯರು, ರಾಜಕೀಯ ಮುಖಂಡರು ಜೊತೆಯಾಗಿದ್ದರು. ಅಷ್ಟಕ್ಕೂ ಇವರಿಬ್ಬರು ಮದುವೆ ಆಗುವುದಕ್ಕೆ ಕೇರಳವನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಈ ಕುತೂಹಲಕ್ಕೆ ಅವರೇ ಉತ್ತರ ಕೊಟ್ಟಿದ್ದಾರೆ. ಮೊನಾಲಿಸಾ ಹಾಗೂ ಮುಹಮ್ಮದ್ ಫರ್ಮಾನ್ ಇಬ್ಬರೂ ಕಳೆದ ಆರು ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದರು. ಸಿನಿಮಾದ ಸೆಟ್‌ನಲ್ಲಿ ಮೊನಾಲಿಸಾ ಹಾಗೂ ಮುಹಮ್ಮದ್ ಫರ್ಮಾನ್ ಇಬ್ಬರೂ ಪರಿಚಯ ಆಗಿತ್ತು. ಅದು ಪ್ರೀತಿಗೆ ತಿರುಗಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಈ ಮದುವೆ ಮೊನಾಲಿಸಾ ತಂದೆಗೆ ಇಷ್ಟವಿರಲಿಲ್ಲ. ಹೀಗಾಗಿ ತಂದೆಯ ವಿರೋಧವಿದ್ದರಿಂದ ತನ್ನ ಪ್ರೇಮವನ್ನು ಉಳಿಸಿಕೊಳ್ಳುವುದಕ್ಕೆ ಕೇರಳದ ತಿರುವನಂತಪುರಂ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಮೊನಾಲಿಸಾ ನೀಡಿದ ದೂರಿನಲ್ಲಿ ತನ್ನ ತಂದೆ ಬಲವಂತವಾಗಿ ಮನೆಗೆ ಕರೆದೊಯ್ದು ಮತ್ತೊಬ್ಬರೊಂದಿಗೆ ಮದುವೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.






