ಜೆನ್ನಿಫರ್ ಬ್ಯಾರೆಟೊ ವಿಶ್ವ ಸುಂದರಿ-2026
ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ 7 ವರ್ಷದ ಮಗುವಿನ ತಾಯಿ 'ಮಿಸ್ ಯೂನಿವರ್ಸ್'
Views: 7
ಕನ್ನಡ ಕರಾವಳಿ ಸುದ್ದಿ: ಪೋರ್ಟೊರಿಕೊ ದೇಶದ ಸುಂದರಿ ಜೆನ್ನಿಫರ್ ಬ್ಯಾರೆಟೊ ‘ಮಿಸ್ ಯೂನಿವರ್ಸ್-2026’ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯ ಪ್ರಶಸ್ತಿ ಗೆದ್ದ ಮೊದಲ ವಿವಾಹಿತ ಮಹಿಳೆ ಮತ್ತು 7 ವರ್ಷದ ಮಗುವಿನ ತಾಯಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
27 ವರ್ಷದ ಜೆನ್ನಿಫರ್ ತವರೂರು ‘ಸ್ಯಾನ್ ಜುವಾನ್’ನಲ್ಲಿ ನಡೆದ 75ನೇ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಗೆದ್ದು ಪೋರ್ಟೊರಿಕೊ ದೇಶಕ್ಕೆ 6ನೇ ಯೂನಿವರ್ಸ್ ಗೆಲುವು ಮಿಸ್ ತಂದುಕೊಟ್ಟಿದ್ದಾರೆ.
ಸ್ಪರ್ಧೆಯಲ್ಲಿ ಡೊಮಿನಿಕನ್ ರಿಪಬ್ಲಿಕ್ ಸುಂದರಿ ಮೆಲಿಸ್ಸಾನೂನೆಜ್ ಮೊದಲ ರನ್ನರ್ ಅಪ್ ಮತ್ತು ವೆನೆಜುವೆಲಾ ಸುಂದರಿ ಕ್ಲಾರಾ ಗೋಯೆಜ್ 2ನೇ ರನ್ನರ್ ಅಪ್ ಆಗಿದ್ದಾರೆ. ಫಿಲಿಪೈನ್ಸ್ ಮತ್ತು ನ್ಯೂಜಿಲೆಂಡ್ ಸ್ಪರ್ಧಿಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿದ್ದಾರೆ.
‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟ ಧರಿಸಿದ್ದ ಕೇರಳದ ಮಾವೆಲಿಕ್ಕಾರ ಮೂಲದ, ಸದ್ಯ ಅಬುಧಾಬಿ ನಿವಾಸಿಯಾಗಿರುವ19 ವರ್ಷದ ಕಲಿಯಾ ಲಿಜ್ ಮೆಜೊ ಬೆಂಗಳೂರಿನಲ್ಲಿ ಕಾನೂನು ಪದವಿ ವಿದ್ಯಾರ್ಥಿನಿಯಾಗಿದ್ದಾರೆ. ‘ಮಾಡೆಲ್’ ಆಗಿಯೂ ಕೆಲಸ ಮಾಡುತ್ತಿದ್ದಾರೆ. ‘ಮಿಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ, ಪ್ರಥಮ ಶ್ರೇಣಿಯ 12 ಸ್ಪರ್ಧಿಗಳಲ್ಲಿ ಒಬ್ಬರಾಗುವಲ್ಲಿ ವಿಫಲರಾದರು.






