ಸಾಂಸ್ಕೃತಿಕ

ಲಂಡನ್‌ ಸುಂದರ ಕ್ಷಣದ ಫೋಟೋಗಳನ್ನು ಹಂಚಿಕೊಂಡ ನಿರೂಪಕಿ ಅನುಶ್ರೀ; ಯಾರೆಲ್ಲಾ ಇದ್ದಾರೆ?

Views: 61

ಕನ್ನಡ ಕರಾವಳಿ ಸುದ್ದಿ: ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಅವರು ಒಂದಲ್ಲಾ ಒಂದು ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ.

ಅನುಶ್ರೀ ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭದಲ್ಲಿ ಹಲವರು ಅನುಶ್ರೀ ಅವರಿಗೆ ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನ ಕೇಳುತ್ತಿದ್ದರು. ಇಷ್ಟು ದಿನ ಟೈಮ್‌ ಏನು ಉತ್ತರ ಕೊಡದ ಅನುಶ್ರೀ ಅವರು, ಮದುವೆ ಆಗೋದಾಗಿ ಹೇಳಿದ್ದಾರೆ. 2025 ರಲ್ಲಿ ಅನುಶ್ರೀ ಮದುವೆಯಾಗಲಿದ್ದಾರೆ ಎನ್ನಲಾಗಿದ್ದು, ಹೊಸ ವರ್ಷ ಆರಂಭದಿಂದ ಇವರು ಮದುವೆ ಡೇಟ್ ಯಾವಾಗ ಅನೌನ್ಸ್ ಮಾಡ್ತಾರೆ, ಯಾರನ್ನು ಮದುವೆ ಆಗ್ತಿದ್ದಾರೆ ಅಂತೆಲ್ಲ ಇವರ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಅನುಶ್ರೀ ಅವರು ಯಾರನ್ನ ಮದುವೆಯಾಗಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದು, ಅವರ ಜೊತೆಗೆ ಅವರು ಕ್ಲೋಸ್‌ ಇರುವ ನಟ, ಚಿತ್ರರಂಗದ ಕೆಲವರೊಂದಿಗೆಲ್ಲ ಒಂದು ರೌಂಡ್‌ ಇವರ ಹೆಸರು ಹರಿದಾಡುತ್ತಿದೆ. ಸದ್ಯ ಅನುಶ್ರೀ ಅವರು, ಆಂಕರಿಂಗ್, ಕುಂಭಮೇಳ, ಕಾಶಿ ಹಾಗೂ ಲಂಡನ್‌ ಸುತ್ತಾಟದಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಸದ್ಯ ಲಂಡನ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಹೌದು, ಲಂಡನ್‌ ಬ್ರಿಡ್ಜ್‌ ಮೇಲೆ ನಿಂತುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ ನಿರೂಪಕಿ ಅನುಶ್ರೀ.

ಇದೇ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು, ಌಂಕರ್ ಅನುಶ್ರೀ ಅವರು ಲಂಡನ್‌ ಟೂರ್‌ನಲ್ಲಿದ್ದಾರೆ. ಇವರ ಜೊತೆಗೆ ಗಾಯಕಿ ಐಶ್ವರ್ಯಾ ರಂಗರಾಜ್‌, ಗಾಯಕ ವಿಜಯ ಪ್ರಕಾಶ್‌ ಹಾಗೂ ಗಾಯಕ ನಿಖಿಲ್ ಪಾರ್ಥಸಾರಥಿ ಕೂಡ ಇದ್ದರು.

ಇನ್ನೂ, ಅನುಶ್ರೀ ಅವರು ಲಂಡನ್‌ಗೆ ಹೋಗಿದ್ದು ಕನ್ನಡಿಗರು ಆಯೋಜಿಸಿದ ವಿಜಯಗಾನದ ಕಾರ್ಯಕ್ರಮಕ್ಕೆ ಜೊತೆಗೆ ಗಾಯಕ ವಿಜಯ ಪ್ರಕಾಶ್‌ ಭಾಗಿಯಾಗಿದ್ದರು. ಲಂಡನ್ನಲ್ಲಿ ಶೋಗಾಗಿ ಹೋಗಿದ್ದ ಅನುಶ್ರೀ ಅವರು ಲವ್ಲೀ ಲಂಡನ್‌, ಸುಂದರ ತಾಣ, ಅಲ್ಲೊಂದು ಸುಂದರ ಕ್ಷಣ ಅಂತ ಬರೆದುಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗುತ್ತಿವೆ. ಇದೇ ಫೋಟೋಸ್ ನೋಡಿ ಅಭಿಮಾನಿಗಳು ಸೂಪರ್ ಅಕ್ಕ, ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಅಂತ ಕಾಮೆಂಟ್ಸ್ ಹಾಕಿದ್ದಾರೆ.

 

Related Articles

Back to top button