ಕೋಟೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ ಎಸ್ ಎಸ್ ವಾರ್ಷಿಕ ಶಿಬಿರ: ಕಾವಿ ಕಲೆಯ ಕುರಿತು ಪರಿಚಯ ಮತ್ತು ಪ್ರಾತ್ಯಕ್ಷಿಕೆ, ಸಮಕಾಲೀನ ಸಾಮಾಜಿಕ ಆತಂಕಗಳು ಸಂವಾದ
Views: 139
ಕನ್ನಡ ಕರಾವಳಿ ಸುದ್ದಿ: ನಡೂರಿನ ಶ್ರೀವಾಣಿ ಪ್ರೌಢ ಶಾಲೆಯಲ್ಲಿ ನಡೆಯುತ್ತಿರುವ ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ರಾಷ್ಟ್ರೀಯ ಸೇವಾ ಯೋಜನೆ ಇದರ 2025-26ನೇ ಸಾಲಿನ ವಾರ್ಷಿಕ ಶಿಬಿರದಲ್ಲಿ ಕಾವಿ ಕಲೆಯ ಕುರಿತು ಪರಿಚಯ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಕಲಾವಿದರಾದ ಜನಾರ್ದನ ಹಾವಂಜೆ ಇವರು ಈ ಕಲೆಯ ವಿಶಿಷ್ಟತೆ, ಇತಿಹಾಸ ಮತ್ತು ಸಮಕಾಲೀನ ಅದರ ಸಂರಕ್ಷಣೆಯ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಪಾರಂಪರಿಕವಾದ ಈ ಕಲೆಯ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸಿರುವ ಜನಾರ್ದನ ಹಾವಂಜೆ ಅವರು ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ಕಾವಿ ಕಲೆಯ ವೈಶಿಷ್ಟ್ಯ ಮತ್ತು ವಿಭಿನ್ನತೆಯ ಕುರಿತು ಮಾತನಾಡಿದರು.
ಕಲೆಯ ಕುರಿತಾದ ಆಸಕ್ತಿಗಳನ್ನು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಸೌಂದರ್ಯ ಪ್ರಜ್ಞೆ, ನಾಗರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಸಹಕಾರಿ ಆಗಬಲ್ಲದು ಎಂದರು. ಲಲಿತ ಕಲೆಗಳ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಸಾಧ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಉದಯ್ ಶೆಟ್ಟಿ ಮತ್ತು ಶಿಬಿರಾಧಿಕಾರಿಗಳಾದ ನಿರಂಜನ ರಶ್ಮಿ, ಶ್ರತಿ ಆಚಾರ್ಯ, ರಂಜಿತ್ ಹಾಗೂ ಘಟಕ ನಾಯಕರು ಉಪಸ್ಥಿತರಿದ್ದರು.
.
ಸಮಕಾಲೀನ ಸಾಮಾಜಿಕ ಆತಂಕಗಳು ಮತ್ತು ಮಾರ್ಗೋಪಾಯ ಸಂವಾದ
ಡಾ ಪಿವಿ ಭಂಡಾರಿ ಮನೋವೈದ್ಯರು ಎ ವಿ ಬಾಳಿಗ ಹಾಸ್ಪಿಟಲ್, ಉಡುಪಿ ಇವರು ಸಮಕಾಲೀನ ಸಾಮಾಜಿಕ ಆತಂಕಗಳು ಮತ್ತು ಅವುಗಳನ್ನು ಪರಿಹರಿಸಲು ಅನುಸರಿಸ ಬಹುದಾದ ಮಾರ್ಗೋಪಾಯ ಕುರಿತು ಸಂವಾದ ನಡೆಸಿದರು.
ಪರೀಕ್ಷಾ ಆತಂಕ, ಇಂಗ್ಲಿಷ್ ಭಾಷಾ ಕೌಶಲದ ಕೊರತೆ, ಕೀಳರಿಮೆಯ ಮನೋಭಾವ ಇವುಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಅವುಗಳನ್ನು ಪರಿಹರಿಸಿ ಆತ್ಮ ವಿಶ್ವಾಸದ ಸಮತೋಲಿತ ಜೀವನ ದೃಷ್ಟಿಯನ್ನು ಕಂಡುಕೊಳ್ಳುವ ಸಾಧ್ಯತೆಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ವಾಣಿ ವಿದ್ಯಾ ಅಭಿವೃದ್ಧಿ ಸಂಘದ ಆಡಳಿತ ಅಧಿಕಾರಿಗಳಾದ ಎಂ. ವಿಶ್ವನಾಥ ಶೆಟ್ಟಿ ಇವರು ಮತ್ತು ಶಿಬಿರದ ಯೋಜನಾಧಿಕಾರಿಗಳಾದ ನಿರಂಜನ ರಶ್ಮಿ ಹಾಗೂ ಶ್ರುತಿ ಆಚಾರ್ಯ ಎನ್, ರಂಜಿತ್ ಹಾಗೂ ಘಟಕ ನಾಯಕರು ಉಪಸ್ಥಿತರಿದ್ದರು.






