ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನ ಬ್ರಹ್ಮರಥೋತ್ಸವ ಸಂಭ್ರಮ -2024

Views: 134
ಕನ್ನಡ ಕರಾವಳಿ ಸುದ್ದಿ: ಕುಂಭಾಸುರನಿಗೆ ಭೀಮನ ಅಸಿಯಿಂದ ಮರಣ ಸಂಭವಿಸಿದ ಕಾರಣ ಈ ಗೌತಮ ಕ್ಷೇತ್ರವು ಕುಂಭಾಸಿ ಹೆಸರಿನಿಂದ ಸುಪ್ರಸಿದ್ಧವಾಯಿತು. ಆ ಕ್ಷೇತ್ರವೇ ನಾಗಾಚಲವಾಗಿದ್ದು ಇದಕ್ಕೆ ‘ಆನೆಗುಡ್ಡೆ’ ಎಂದು ಕರೆಯಲಾಗುತ್ತದೆ. ಗಣಪತಿಯು ಆನೆ ರೂಪದಲ್ಲಿ ಭೀಮಸೇನನಿಗೆ ಕತ್ತಿಯನ್ನು ಅನುಗ್ರಹಿಸಿದ ಪ್ರದೇಶದಲ್ಲಿ ಆನೆಯಾಕಾರದಲ್ಲಿ ಗಣಪತಿಯು ಉದ್ಭವಿಸಿದನು. ಆದ್ದರಿಂದ ಈ ಕ್ಷೇತ್ರವು ‘ಆನೆಗುಡ್ಡೆ ಎಂದು ಪ್ರಸಿದ್ಧ’ವಾಯಿತು.

ಹಿಂದೆ ಪೌಲಸ್ತ್ಯ ಪ್ರಪೌತ್ರನಾದ ಕುಂಭಾಸುರನೆಂಬ ರಾಕ್ಷಸನು ಶ್ರೀರಾಮನಿಗೆ ಹೆದರಿ ಮಹೇಂದ್ರಗಿರಿಯಲ್ಲಿ ಅಡಗಿಕೊಂಡಿದ್ದನು. ನಂತರ ಅಲ್ಲಿಂದ ಹೊರಟು ನಾರದರ ಮಾತಿನಂತೆ ಈಶ್ವರನನ್ನು ಮೆಚ್ಚಿಸಿ ವರ ಪಡೆದು ವರ ಬಲೋತ್ಕಾರದಿಂದ ಮದೋನ್ಮತನಾಗಿ ಈ ಕ್ಷೇತ್ರಕ್ಕೆ ಬಂದು ಕೈಗೆ ಸಿಕ್ಕಿದ ಜನರನ್ನು ದಂಡಿಸಿ ತನ್ನ ಸೇನಾ ಸಮೇತವಾಗಿ ರಾಜ್ಯ ಸ್ಥಾಪನೆ ಮಾಡಿ ಆಡಳಿತ ಮಾಡ ತೊಡಗಿದನು. ಇದರಿಂದ ಭಯಭೀತರಾದ ಸ್ಥಳೀಯರು ಅಲ್ಲಿಂದ ಓಡಿ ಹೋದರು. ಆ ಸಮಯದಲ್ಲಿ ಪಾಂಡವರು ದ್ರೌಪದಿ ಸಮೇತರಾಗಿ ವನವಾಸಿಗಳಾಗಿ ತೀರ್ಥಯಾತ್ರೆ ಮಾಡುತ್ತಾ ತುಂಗಭದ್ರ ತೀರದಲ್ಲಿ ಇರುವುದನ್ನು ಅರಿತ ಗೌತಮರು ಹಾಗೂ ಇತರೆ ಋಷಿಗಳು ಲೋಕಕಂಟಕನಾದ ಕುಂಭಾಸುರನ ಉಪಟಳದ ಬಗ್ಗೆ ವಿವರಣೆ ನೀಡಿ ಅವನು ನೀಡುತ್ತಿರುವ ತೊಂದರೆಗಳನ್ನು ಕುರಿತು ವಿವರಿಸಿದರು. ಅದನ್ನು ಕೇಳಿದ ಧರ್ಮರಾಯನು ಕುಂಭಾಸುರನನ್ನು ಸಂಹರಿಸಲು ಸಹೋದರ ಭೀಮಸೇನನಿಗೆ ಅಪ್ಪಣೆ ನೀಡಿದರು. ಪಾಂಡವರು ಭಾರ್ಗವ ಕ್ಷೇತ್ರಕ್ಕೆ ಬಂದು ಮಧುವನದಲ್ಲಿ ತಂಗಿ ಹರಿಹರ ದರ್ಶನ ಮಾಡಿದರು. ನಂತರ ಸ್ವಲ್ಪ ದಿನ ಅಲ್ಲಿದ್ದು ಅಲ್ಲಿಂದ ನಾಗಾಚಲಕ್ಕೆ ಬಂದು ಗಣೇಶನನ್ನು ಅರ್ಚಿಸಿದರು.

ಸುಪ್ರಸಿದ್ಧ ಕುಂಭಾಸಿಗೆ ‘ಆನೆಗುಡ್ಡೆ’ ಹೆಸರು ಹೇಗೆ ಬಂತು..?
ಅಣ್ಣನ ಮಾತಿನಂತೆ ಭೀಮನು ಯುದ್ಧಕ್ಕೆ ಸನ್ನದ್ಧನಾದನು. ಶಂಕನಾದ ಮಾಡುತ್ತಾ ಕುಂಭಾಸುರ ಇರುವ ಕಡೆ ಯುದ್ಧಕ್ಕೆ ತರಳಿದನು. ಇವರಿಬ್ಬರ ನಡುವೆ ಭಯಂಕರವಾದ ಯುದ್ಧ ನಡೆಯಿತು ಕುಂಭಾಸುರ ಈಶ್ವರನಿಂದ ವರ ಪಡೆದಿದ್ದರಿಂದ ಅವಧ್ಯನಾಗಿಯೇ ಉಳಿದು, ಭೀಮನು ಸರಿಸಮಾನಾಗಿ ಹೋರಾಟ ಮಾಡಿದರು. ಒಂದು ಹಂತದಲ್ಲಿ ಕುಂಭಾಸುರ ಮುನ್ನಡೆಯನ್ನು ಸಾಧಿಸಿದನು. ಇದರಿಂದ ಭೀಮನು ಚಿಂತಿಸುತ್ತಿರುವಾಗ ಅಶರೀರವಾಣಿಯೊಂದು ಕೇಳಿ ಬಂದಿತು. “ವಿಘ್ನೇಶ್ವರನ ಅನುಗ್ರಹದಿಂದ ಪಡೆದ ಕತ್ತಿಯಿಂದ ಅಸಿ ಮಾತ್ರ ಕುಂಭಾಸುರನನ್ನು ಮಣಿಸಬಹುದು” ಎಂದು ತಿಳಿಸಿ ತಾನು.ಕೂಡಲೇ ಭೀಮನು ಗಜರೂಪಿಯಾದ ಗಣೇಶನನ್ನು ಧ್ಯಾನಿಸಿದನು.
ಆಗ “ವಿಘ್ನೇಶ್ವರನು ಆನೆ ರೂಪದಲ್ಲಿ ಕಾಣಿಸಿಕೊಂಡು ಪ್ರಸಾದ ರೂಪದಲ್ಲಿ ಭೀಮನಿಗೆ ಖಡ್ಗವನ್ನು ನೀಡಿದ ಆ ಕತ್ತಿಯಿಂದ ಭೀಮನು ಕುಂಭಾಸುರನನ್ನ ಸಂಹರಿಸಿದನು”. ಹೀಗೆ ಆತನೊಂದಿಗಿದ್ದ ರಾಕ್ಷಸರೆಲ್ಲರೂ ನಿರ್ನಾಮವಾದರು.
ಹೀಗೆ ಕುಂಬಾಸುರನಿಗೆ ಭೀಮನ ಅಸಿಯಿಂದ ಮರಣ ಸಂಭವಿಸಿದ ಕಾರಣ ಈ ಗೌತಮ ಕ್ಷೇತ್ರವು ಕುಂಭಾಸಿ ಹೆಸರಿನಿಂದ ಸುಪ್ರಸಿದ್ಧವಾಯಿತು. ಆ ಕ್ಷೇತ್ರವೇ ‘ನಾಗಾಚಲ’ವಾಗಿದ್ದು ಇದಕ್ಕೆ ‘ಆನೆಗುಡ್ಡೆ’ ಎಂದು ಕರೆಯಲಾಗುತ್ತದೆ.
ಗಣಪತಿಯು ಆನೆ ರೂಪದಲ್ಲಿ ಭೀಮಸೇನನಿಗೆ ಕತ್ತಿಯನ್ನು ಅನುಗ್ರಹಿಸಿದ ಪ್ರದೇಶದಲ್ಲಿ ಆಮೆಯಾಕಾರದಲ್ಲಿ ಗಣಪತಿಯು ಉದ್ಭವಿಸಿದನು. ಆದ್ದರಿಂದ ಈ ಕ್ಷೇತ್ರವು ‘ಆನೆಗುಡ್ಡೆ ಎಂದು ಪ್ರಸಿದ್ಧ’ವಾಯಿತು.
‘ಮೂಲಬಿಂಬ’ ನಿರಾಕಾರ ಮೂರ್ತಿ ‘ಗಣಪತಿ’
ಹೀಗೆ ನಾಗಾಚಲದಲ್ಲಿ ಸ್ವಯಂವ್ಯಕ್ತನಾದ ವಿಶ್ವಂಭರ ರೂಪಿ ಗಣೇಶನನ್ನು ವಿಧಿ ನಿಯಮದಂತೆ ಕ್ಷೇತ್ರಕ್ಕೆ ಬಂದ ಭಕ್ತರು ಭಕ್ತಿ ಪೂರಕವಾಗಿ ಆರಾಧಿಸಿ ಇಷ್ಟಾರ್ಥಗಳನ್ನು ಪಡೆದು ಕೃತಾರ್ಥರಾಗುತ್ತಾರೆ.
ಇಲ್ಲಿನ ಉಪಾಧ್ಯಾಯ ಕುಟುಂಬದವರು ಶ್ರದ್ಧಾ ಭಕ್ತಿಯಿಂದ ಶ್ರೀ ವಿನಾಯಕನನ್ನು ಆರಾಧಿಸಿ, ಶ್ರೀ ದೇವರಲ್ಲಿ ವಿಶೇಷ ಕಲಾ ಸಾನಿಧ್ಯ ನೆಲೆಸುವಂತೆ ಮಾಡಿದರು.
ಆ ದೇವಸ್ಥಾನ ನಂತರ ದಶಕಗಳ ಕಾಲ ಅಸ್ಪಷ್ಟವಾಗಿ ಉಳಿದಿತ್ತು. ಆ ದೇವಸ್ಥಾನವೇ ಈಗ ನಾವು ಕಾಣುವ ಪ್ರತಿದಿನ ಸಹಸ್ರಾರು ಭಕ್ತರು ಭೇಟಿ ನೀಡುವ ‘ಆನೆಗುಡ್ಡೆಯ ವಿನಾಯಕ ದೇವಾಲಯ‘ ಇದಾಗಿದೆ.
ಈ ಕ್ಷೇತ್ರದಲ್ಲಿ ಮೂಲ ಶಿಲೆಯನ್ನು ‘ಮೂಲಬಿಂಬ’ ಎಂದು ಕರೆಯಲಾಗುತ್ತದೆ ಅದು ನಿರಾಕಾರ ಮೂರ್ತಿಯಾಗಿದೆ ಇದಕ್ಕೆ ಕೃತಕವಾಗಲಿ, ನೈಸರ್ಗಿಕವಾಗಲಿ ಕೆತ್ತನೆ ಕೆಲಸವಾಗಿರುವುದಿಲ್ಲ ಆದರೆ, ಈ ವಿಗ್ರಹದಲ್ಲಿ ಮಸುಕಾದ ಆನೆಯ ಸೊಂಡಿಲು ಮಾತ್ರ ಕಂಡುಬರುತ್ತದೆ ಈ ಮೂಲಬಿಂಬವನ್ನು ಭಕ್ತರು ಬೆಳಿಗ್ಗೆ ಮತ್ತು ಮಧ್ಯಾಹ್ನ ಮಹಾಪೂಜೆಯ ಮೊದಲು ಪ್ರತಿದಿನ ಎರಡು ಬಾರಿ ವೀಕ್ಷಿಸಬಹುದಾಗಿದೆ.
ಅಭಿಷೇಕದ ನಂತರ ಗಣಪತಿಗೆ ಮುಖವಾಡ ಧರಿಸಿದ ನಂತರ ಗಣಪತಿಯು ಕುಳಿತಿರುವ ಭಂಗಿಯಲ್ಲಿರುವುದನ್ನು ಕಾಣಬಹುದು. ಇದೇ ಕುಳಿತ ಸ್ಥಿತಿಯಲ್ಲಿ ಉಳಿದ ಭಾಗ ಇಡೀ ರಾತ್ರಿ ಹಾಗೂ ಮರುದಿನ ಬೆಳಿಗ್ಗೆ ನಡೆಯುವ ಅಭಿಷೇಕದ ವರೆಗೆ ಗಣಪತಿ ಕುಳಿತ ಭಂಗಿಯಲ್ಲಿರಲು ಬಯಸುತ್ತಾನೆ. ಮರುದಿನ ಅಭಿಷೇಕದ ನಂತರ ಗಣಪತಿ ಮತ್ತೆ ನಿಲ್ಲುವ ಭಂಗಿಗೆ ಬರುತ್ತಾನೆ.
ಗಣಪತಿಗೆ ಇಷ್ಟಾರ್ಥ ಸೇವೆಗಳು
ಇಲ್ಲಿ ಶ್ರೀ ದೇವರಿಗೆ ಪಂಚ ಕಜ್ಜಾಯ, ಹರಿವಾಣ ನೈವೇದ್ಯ, ಪಂಚಾಮೃತ, ಕಡುಬಿನ ಸೇವೆ, ರಂಗಪೂಜೆ ಇತ್ಯಾದಿ ಸೇವೆಗಳು ನಿರಂತರವಾಗಿ ನಡೆಯುತ್ತದೆ.

ಪ್ರತಿ ಸಂಕಷ್ಟಹರ ಚತುರ್ಥಿಯಂದು ದೇವಾಲಯದ ವತಿಯಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಯಾಗ ಜರಗುತ್ತದೆ.
ಆನೆಗುಡ್ಡೆ ಶ್ರೀ ಕ್ಷೇತ್ರಕ್ಕೆ ದೂರದ ಊರುಗಳಿಂದ ಬರುವ ಭಕ್ತರಿಗೆ ಅನುಕೂಲವಾಗುವಂತೆ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಮಧ್ಯಾಹ್ನ ಮಹಾಪೂಜೆಯ ನಂತರ ಬರುವ ಭಕ್ತಾದಿಗಳಿಗೆ ಉಚಿತ ಅನ್ನ ಸಂತರ್ಪಣೆ ಇರುತ್ತದೆ.
ಈ ಕ್ಷೇತ್ರಕ್ಕೆ ಹೀಗೆ ಬನ್ನಿ…..
ಈ ದೇವಸ್ಥಾನಕ್ಕೆ ಸುಲಭವಾಗಿ ಆಗಮಿಸುವ ಮಾರ್ಗವಿದೆ ಈ ಪ್ರದೇಶವು ಉಡುಪಿ ಕುಂದಾಪುರದ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಹತ್ತಿರ ಕುಂದಾಪುರದಿಂದ 5 ಕಿ.ಮೀ. ಉಡುಪಿಯಿಂದ 26 ಕಿಲೋ ಮೀಟರ್ ದೂರದಲ್ಲಿದೆ. ದೇವಸ್ಥಾನದ ಎದುರುಗಡೆ ಮಹಾಲಿಂಗೇಶ್ವರನನ್ನು ಹರಿಹರೇಶ್ವರ ದೇವಾಲಯ ಒಂದು ಪರ್ಲಾಂಗ್ ದೂರದಲ್ಲಿದೆ. ದೇವಸ್ಥಾನದ ಹಿಂಭಾಗದ ವಕ್ವಾಡಿ ಮಾರ್ಗವಾಗಿ ಶ್ರೀ ವಾದಿರಾಜರ ಜನ್ಮ ಕ್ಷೇತ್ರ ಹೂವಿನಕೆರೆಯಲ್ಲಿದೆ.
ಬ್ರಹ್ಮರಥೋತ್ಸವ ಸಂಭ್ರಮ- 2024
ಶ್ರೀ ಕ್ಷೇತ್ರದಲ್ಲಿ ದಿನಾಂಕ 05.12.203ನೇ ಗುರುವಾರ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮರಥೋತ್ಸವ ಮತ್ತು ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು
ದಿನಾಂಕ: ಬೆಳಿಗ್ಗೆ 02.12.2024ನೇ ಸೋಮವಾರ ದೇವತಾ ಪ್ರಾರ್ಥನೆ ಪುಣ್ಯಾಹ, ಸ್ವಸ್ತಿವಾಚನ, ಗಣ ಹೋಮ, ಅಥರ್ವಶೀರ್ಷ, ಉಪನಿಷತ್ ಹೋಮ, ಸತ್ಯ ಗಣಪತಿ ವೃತ, ಮಹಾಪೂಜೆ
ರಾತ್ರಿ: ರಂಗ ಪೂಜಾ ಡೋಲಾರೋಹಣ, ಸುವರ್ಣ ಪಲ್ಲಕ್ಕಿ ಉತ್ಸವ
ದಿನಾಂಕ 03 .12. 2018 ನೇ ಮಂಗಳವಾರ ಮಾರ್ಗಶಿರ ಶುದ್ಧ ದ್ವಿತೀಯಾ, ಪೂರ್ವಾಹ್ನ ಉಪನಿಷತ್ ಕಲಶಾಭಿಷೇಕ, ಗಣ ಹೋಮ, ಸತ್ಯ ಗಣಪತಿ ವ್ರತ, ಮಹಾಪೂಜೆ ರಾತ್ರಿ: ಪುರ ಮೆರವಣಿಗೆ, ರಂಗ ಪೂಜಾ, ಸುವರ್ಣ ಪಲ್ಲಕ್ಕಿ ಉತ್ಸವ
ದಿನಾಂಕ 04.12 2024ನೇ ಬುಧವಾರ ಪೂರ್ವಾಹ್ನ ನವಕ ಪ್ರಧಾನ ಕಲಾಶಾಭಿಷೇಕ, ಅಗ್ನಿ ಜನನ, ಗಣ ಹೋಮ, ರಾತ್ರಿ: ಪುರ ಮೆರವಣಿಗೆ ರಂಗಪೂಜಾ, ಸುವರ್ಣ ಪಲ್ಲಕ್ಕಿ ಉತ್ಸವ
ದಿನಾಂಕ 5.12.2024ನೇ ಗುರುವಾರ ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ಮತ್ತು ಬ್ರಹ್ಮ ರಥೋತ್ಸವ
ಸಂಜೆ 7ಕ್ಕೆ ರಥೋತ್ಸವ, ಸುಡುಮದ್ದು ಪ್ರದರ್ಶನ
ತಾರೀಕು 06.12.2024ನೇ ಶುಕ್ರವಾರ ಪೂರ್ವಾಹ್ನ ಚೂರ್ಣೋತ್ಸವ ಅವಭೃತ ಸ್ನಾನ, ವಸಂತರಾಧನೆ, ಮಂತ್ರಾಕ್ಷತೆ
ಸಾಂಸ್ಕೃತಿಕ ಕಾರ್ಯಕ್ರಮಗಳು
ದಿನಾಂಕ :02.12.2024ನೇ ಸೋಮವಾರ ಸಂಜೆ 5:30ಕ್ಕೆ ಯಕ್ಷಗಾನ (ಕುಮಾರಿ ಪಾವನ ಐತಾಳ್ ಹಾಗೂ ಬಳಗ ಯಕ್ಷಕಲಾ ರಂಗ ನೀರಸಾಲೆ ಬೀಜಾಡಿ, ಕೋಟೇಶ್ವರ ಇವರಿಂದ)
ದಿನಾಂಕ 03.12. 2024ನೇ ಮಂಗಳವಾರ ಸಂಜೆ 4 ರಿಂದ ನಾಟ್ಯಾಮೃತ (ವಿಧೂಷಿ ಪಾವನ ಹಾಗೂ ಬಳಗ ಶಾರದಾ ನೃತ್ಯಾಲಯ ಮಾರ್ಪಳ್ಳಿ ಉಡುಪಿ ಇವರಿಂದ)
ಸಂಜೆ 6ಕ್ಕೆ ಯಕ್ಷಗಾನ ತಾಳಮದ್ದಳೆ (ಯಕ್ಷ ಮಂಜುಳಾ ಮಹಿಳಾ ತಾಳಮದ್ದಳೆ ಬಳಗ ಕದ್ರಿ ಮಂಗಳೂರು ಇವರಿಂದ)
ದಿನಾಂಕ 04.02 2024ನೇ ಬುಧವಾರ ಸಂಜೆ ವಿಸ್ಮಯ ವೈವಿಧ್ಯ (ಜಾದುಗಾರ ಸತೀಶ್ ಹೆಮ್ಮಾಡಿ ತಂಡದವರಿಂದ)
ದಿನಾಂಕ 05.12.2024ನೇ ಗುರುವಾರ ಅಪರಾಹ್ನ 3:30 ರಿಂದ 5 ಗಂಟೆಯ ತನಕ ವೀಣಾ ನಾದಾಮೃತ (ವಿಧೂಷಿ ಶುಭಶ್ರೀ ಅಡಿಗ ಹಾಗೂ ಶಿಷ್ಯರು ಉಡುಪಿ ಇವರಿಂದ)
ಸಂಜೆ 5 ರಿಂದ ಸ್ಯಾಕ್ಸೋ ಫೋನ್ ವಾದನ (ಶ್ರೀ ಸತೀಶ್ ದೇವಾಡಿಗ ಮತ್ತು ಬಳಗ ಸಾಲಿಗ್ರಾಮ ಇವರಿಂದ)
ರಾತ್ರಿ 9:30 ರಿಂದ ಯಕ್ಷಗಾನ ಬಯಲಾಟ ಪೌರಾಣಿಕ ಪ್ರಸಂಗ(ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಇವರಿಂದ)
ದಿನಾಂಕ 02.12. 2024 ರಿಂದ 04.12.2024ರ ತನಕ ಪ್ರತಿದಿನ ಅಪರಾಹ್ನ 3:30 ರಿಂದ 5:30ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ
ಶ್ರೀ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ಶ್ರೀ ಕೆ. ಶ್ರೀ ರಮಣ ಉಪಾಧ್ಯಾಯ,ಅನುವಂಶಿಕ ಆಡಳಿತ ಧರ್ಮದರ್ಶಿ
ಶ್ರೀ ಕೆ ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು ಅನುವಂಶಿಕ ಪರ್ಯಾಯ ಅರ್ಚಕರು
ಶ್ರೀ ಕೆ ಪದ್ಮನಾಭ ಉಪಾಧ್ಯಾಯ ಅನುವಂಶಿಕ ಧರ್ಮದರ್ಶಿಗಳು
ಶ್ರೀ ಕೆ. ನಿರಂಜನ ಉಪಾಧ್ಯಾಯ, ಅನುವಂಶಿಕ ಧರ್ಮದರ್ಶಿ.
Address
Anegudde Shri Vinayaka temple kumbasi -576257. kundapura, taluk, Udupi district,
Contact -office ph- 7406093 533 Ph- 9480272221
Karnataka Bank kumbasi 4152500100097901
IFSC KARB0000415









