ಬಾರ್ಕೂರು ಶೆಟ್ಟಿಗಾರ್ ಇಂಡಸ್ಟ್ರೀಸ್ ಸಾರ್ವಜನಿಕ ಗಣೇಶೋತ್ಸವ: ಧಾರ್ಮಿಕ ಸಭಾ ಕಾರ್ಯಕ್ರಮ- ವೈಭವದ ಮೆರವಣಿಗೆ

Views: 163
ಬಾರ್ಕೂರು : ರಂಗನಕೇರಿ ಶೆಟ್ಟಿಗಾರ್ ಇಂಡಸ್ಟ್ರೀಸ್ ಇದರ19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ 2ನೇ ದಿನದಂದು ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ.8 ರಂದು ರವಿವಾರ ನಡೆಯಿತು.
ಶ್ರೀ ರಾಜಾರಾಮ್ ಶೆಟ್ಟಿ ಹೋಟೆಲ್ ಆಶ್ರಯ ಬ್ರಹ್ಮಾವರ, ಸಂಚಾಲಕರು ಎಸ್. ವಿ.ವಿ. ಎನ್.ಇ.ಎಂ ಸ್ಕೂಲ್ ಹೆರಾಡಿ ಬಾರ್ಕೂರು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಅತ್ಯಂತ ಶೃದ್ಧಾ ಭಕ್ತಿಯಿಂದ ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ. ಯಾವುದೇ ಜಾತಿ ಮತ ಭೇದವಿಲ್ಲದೆ ಆಚರಿಸುವ ಹಬ್ಬಗಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ ಯಿಂದ ಉತ್ತಮ ಸಮಾಜ ಕಟ್ಟುವ ಮೂಲಕ ದೇಶವನ್ನು ಕಟ್ಟುವಲ್ಲಿ ನಮ್ಮೆಲ್ಲರ ಪ್ರಯತ್ನ ಪ್ರಾಮಾಣಿಕವಾಗಿ ಸಾಗಬೇಕು ಎಂದರು.
ಸಮಿತಿಯ ಅಧ್ಯಕ್ಷರಾದ ಶ್ರೀ ಬಿ. ರಮೇಶ ಆಚಾರ್ಯ ಬಾರ್ಕೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಪುರುಷೋತ್ತಮ್ ಶೆಟ್ಟಿಗಾರ್ ನಿವ್ರತ್ತ ಉಪನ್ಯಾಸಕರು ಎಕ್ಸೆಲ್ ಪಿಯು ಕಾಲೇಜ್ ಗುರುವಾಯನಕೆರೆ ಬೆಳ್ತಂಗಡಿ ಇವರು ಮಾತನಾಡಿ, ಸಮಾಜಕ್ಕೆ ನಿಜವಾಗಿ ಸೇವೆ ಸಲ್ಲಿಸುತ್ತಿರುವ ಅದೆಷ್ಟೋ ಸಾಧಕರನ್ನು ಗುರುತಿಸುವುದು ಮತ್ತು ಅಭಿನಂದಿಸುವುದು ನಿಜಕ್ಕೂ ಅಭಿನಂದನಾರ್ಹರು. ಧಾರ್ಮಿಕ ಸತ್ಕಾರ್ಯಗಳ ಮೂಲಕ ಇಂತಹ ಕಾರ್ಯಕ್ರಮಗಳು ಸದೃಢ ಸಮಾಜಕ್ಕೆ ಬುನಾದಿ ಎಂದರು.
ವೇದಿಕೆಯಲ್ಲಿ ಶ್ರೀ ಬಿ ಶಾಂತರಾಮ್ ಶೆಟ್ಟಿ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರ್ಕೂರು, ಶ್ರೀ ಸಿ.ಎ ಗಣೇಶ್ ಬಿ ಕಾಂಚನ್ ಬಾರ್ಕೂರು, ಶ್ರೀ ನಾರಾಯಣ ಮೂರ್ತಿ ವಿಷ್ಣು ಡೆವಲಪರ್ಸ್ ಬೆಂಗಳೂರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀರಾಜಾರಾಮ್ ಶೆಟ್ಟಿ ಹೋಟೆಲ್ ಆಶ್ರಯ ಬ್ರಹ್ಮಾವರ, ಶ್ರೀ ನಾರಾಯಣ ಮೂರ್ತಿ, ಶ್ರೀ ಸತೀಶ್ ಪೂಜಾರಿ ಮಾಲಕರು ಗ್ಲೋಬಲ್ ಕ್ವಾಯರ್ ಇಂಡಸ್ಟ್ರೀಸ್ ಬೆಣ್ಣೆಕುದ್ರು ಬಾರ್ಕೂರು, ಶ್ರೀ ಸಂದೀಪ್ ಬಿ ಪೂಜಾರಿ, ನಡೂರು ದೇವಾಲಯಗಳ ಗುತ್ತಿಗೆದಾರರು ನಡೂರು ಅಸೋಸಿಯೇಟ್ಸ್, ವೇದಮೂರ್ತಿ ರಮೇಶ್ ಭಟ್, ದಾಮೋದರ ಶರ್ಮ, ಲೋಕೇಶ್ ಶೆಟ್ಟಿಗಾರ್ ಮತ್ತು ದಂಪತಿ, ಶ್ರೀಮತಿ ಗೀತಾ ಆನಂದ್ ಶೆಟ್ಟಿ ಶಿಕ್ಷಕರು ಸರಕಾರಿ ಪ್ರೌಢಶಾಲೆ ವಡ್ಡರ್ಸೆ, ಶ್ರೀ ಗಿರೀಶ್ ಕುಮಾರ್ ಸಹಾಯಕ ಪೊಲೀಸ್ ಉಪನಿರೀಕ್ಷಕರು ಉಡುಪಿ,ಶ್ರೀಮತಿ ಪಲ್ಲವಿ ರಾಜ್ ಪ್ರಾಥಮಿಕ ಆರೋಗ್ಯ ಕೇಂದ್ರ ಬಾರ್ಕೂರು, ಅರುಣ್,ಉದಯ್, ಹರೀಶ್ ಮುಂತಾದ ಸಾಧಕರನ್ನು ಸನ್ಮಾನಿಸಲಾಯಿತು.
ಉದ್ಯಮ ಮತ್ತು ಕ್ರೀ ಕ್ರೀಡಾ ಕ್ಷೇತ್ರದ ಸಾಧಕರಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯಧನ ವಿತರಿಸಲಾಯಿತು.
ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಸ್ವಾಗತಿಸಿದರು. ಸುಧಾಕರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಶಾನುಬೋಗ್ ಪ್ರಾರ್ಥಿಸಿದರು. ದಾಮೋದರ್ ಶರ್ಮ ನಿರೂಪಿಸಿದರು. ಸತೀಶ್ ಅಮೀನ್ ವಂದಿಸಿದರು.ನಂತರ ಶಿವದೂತೆ ಗುಳಿಗೆ ವಿನೂತನ ನಾಟಕ ಪ್ರದರ್ಶನ ನಡೆಯಿತು.
ಸೆಪ್ಟೆಂಬರ್ 9 ರಂದು 3ನೇ ದಿನ ಗಣಪತಿಯ ವಿಸರ್ಜನಾ ಮೆರವಣಿಗೆ
ಮಧ್ಯಾಹ್ನ ಅನ್ನಸಂತರ್ಪಣೆ ನಂತರ 4 ಗಂಟೆಗೆ ಶೆಟ್ಟಿಗಾರ್ ಇಂಡಸ್ಟ್ರೀಸ್ ನಿಂದ ಬಟ್ಟೆ ವಿನಾಯಕ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಪುರ ಮೆರವಣಿಗೆಯಲ್ಲಿ ಹುಲಿ ವೇಷ, ಕೀಲು ಕುದುರೆ, ಟ್ಯಾಬ್ಲೊ, ತಟ್ಟಿರಾಯ,ಆನೆ, ಬೊಂಬೆ ಕುಣಿತ, ಚೆಂಡೆ ಬಳಗ, ವಿವಿಧ ವೇಷ ಭೂಷಣಗಳೊಂದಿಗೆ ವೈಭವದ ಮೆರವಣಿಗೆಯಲ್ಲಿ ರಂಗನಕೇರಿಯ ರತ್ನಗರ್ಭ ಗಣಪತಿ ದೇವಾಲಯದ ಕೆರೆಯಲ್ಲಿ ಜಲ ಸ್ತಂಭನ ನಡೆಯಿತು.

















