ಸಾಮಾಜಿಕ

ವರದಕ್ಷಿಣೆ ಕಿರುಕುಳ: ಮದುವೆಯಾಗಿ 6 ತಿಂಗಳಿಗೆ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ

Views: 173

ಕನ್ನಡ ಕರಾವಳಿ ಸುದ್ದಿ: ಮದುವೆಯಾದ 6 ತಿಂಗಳಿಗೆ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನ ರಾಯದುರ್ಗಂ ನಲ್ಲಿ ನಡೆದಿದೆ.

ದೇವಿಕಾ (35) ಆತ್ಮಹತ್ಯೆಗೆ ಶರಣಾದ  ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ದೇವಿಕಾ ಹೈದರಾಬಾದ್ ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತ್ನಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಗಿ ಪತಿ ಸತೀಶ್ ದೇವಿಕಾ ಪೋಷಕರಿಗೆ ಕರೆ ಮಾಡಿದ್ದಾನೆ. ಪತಿ ಹಾಗೂ ಆತನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ

6 ತಿಂಗಳ ಹಿಂದೆ ದೇವಿಕಾ ಹಾಗೂ ಸತೀಶ್ ಗೋವಾದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಬಳಿಕ ರಾಯದುರ್ಗದಲ್ಲಿನ ಅಪಾರ್ಟ್ ಮೆಂತ್ ಗೆ ಶಿಫ್ಟ್ ಆಗಿದ್ದರು. ಮದುವೆ ಬಳಿಕ ದೇವಿಕಾಳಿಗೆ ಸತೀಶ್, ವರದಕ್ಷಿಣೆಗಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿತ್ತಿದ್ದನು ಎಂದು ದೇವಿಕಾ ಪೋಷಕರು ದೂರು ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Related Articles

Back to top button