ಸಾಂಸ್ಕೃತಿಕ

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ:ಸುದೀಪ್ ಅತ್ಯುತ್ತಮ ನಟ, ಅನುಪಮಾ ಗೌಡ ಅತ್ಯುತ್ತಮ ನಟಿ

Views: 43

ಕನ್ನಡ ಕರಾವಳಿ ಸುದ್ದಿ:ವಿವಿಧ ವಿಭಾಗಗಳಲ್ಲಿ 2019ನೇ ಸಾಲಿನ ಕನ್ನಡ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ.

‘ಪೈಲ್ವಾನ್’ ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ತ್ರಯಂಬಕಂ’ ಚಿತ್ರದ ಅಭಿನಯಕ್ಕೆ ಅನುಪಮಾ ಗೌಡ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರತಿ ವರ್ಷ ಕನ್ನಡ ಚಿತ್ರಗಳಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಪ್ರದಾನ ಮಾಡುತ್ತಾ ಬರುತ್ತಿತ್ತು. ಆದರೆ ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರಶಸ್ತಿ ನೀಡಿರಲಿಲ್ಲ ಎನ್ನಲಾಗುತ್ತಿದೆ. ಒಟ್ಟು 25 ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 24 ವಿಭಾಗಳಿಗೆ ಮಾತ್ರವಲ್ಲದೇ ಒಂದು ತೀರ್ಪುಗಾರರ ವಿಶೇಷ ಪ್ರಶಸ್ತಿ ಇದರಲ್ಲಿದೆ. ಮೊದಲ ಅತ್ಯುತ್ತಮ ಚಿತ್ರವಾಗಿ ‘ಮೋಹನದಾಸ’ ಆಯ್ಕೆ ಆಗಿದೆ. ಇನ್ನುಳಿದಂತೆ ‘ಲವ್‌ ಮಾಕ್ಟೇಲ್’ ಹಾಗೂ ‘ಅರ್ಘ್ಯಂ’ ಚಿತ್ರಗಳು ಕ್ರಮವಾಗಿ 2, 3ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ

ಅತ್ಯುತ್ತಮ ನಟ- ಸುದೀಪ್(ಪೈಲ್ವಾನ್) ಅತ್ಯುತ್ತಮ ನಟಿ- ಅನುಪಮಾ ಗೌಡ (ತ್ರಯಂಬಕಂ) ಅತ್ಯುತ್ತಮ ಸಂಗೀತ ನಿರ್ದೇಶಕ- ವಿ. ಹರಿಕೃಷ್ಣ(ಯಜಮಾನ) ಅತ್ಯುತ್ತಮ ಗಾಯಕ- ರಘು ದೀಕ್ಷಿತ್(ಲವ್ ಮಾಕ್ಟೇಲ್) ಅತ್ಯುತ್ತಮ ಗಾಯಕಿ- ಡಾ. ಜಯದೇವಿ ಜಿಂಗಮ ಶೆಟ್ಟಿ(ರಾಗ ಭೈರವಿ)ಮೊದಲನೆ ಅತ್ಯುತ್ತಮ ಚಿತ್ರ: ಮೋಹನ ದಾಸ (ನಿರ್ಮಾಣ, ನಿರ್ದೇಶನ ಪಿ. ಶೇಷಾದ್ರಿ) 2ನೇ ಅತ್ಯುತ್ತಮ ಚಿತ್ರ: ಲವ್‌ ಮಾಕ್ಟೇಲ್(ನಿರ್ಮಾಣ-ನಾಗಪ್ಪ, ನಿರ್ದೇಶಕ -ಕೃಷ್ಣ) 3ನೇ ಅತ್ಯುತ್ತಮ ಚಿತ್ರ: ಅರ್ಘ್ಯಂ(ನಿರ್ಮಾಣ, ನಿರ್ದೇಶನ- ವೈ ಶ್ರೀನಿವಾಸ್) ವಿಶೇಷ ಸಾಮಾಜಿಕ ಕಳಕಳಿ ಚಿತ್ರ: ಕನ್ನೇರಿ (ನಿರ್ಮಾಣ-ನಿರ್ದೇಶನ ಮಂಜುನಾಥ್. ಎಸ್) ಅತ್ಯುತ್ತಮ ಜನಪ್ರಿಯ ಮನರಂಜನ ಚಿತ್ರ: ಇಂಡಿಯಾ vs ಇಂಗ್ಲೆಂಡ್(ನಿರ್ಮಾಣ- ಶಂಕರೇ ಗೌಡ, ನಿರ್ದೇಶನ- ನಾಗತಿಹಳ್ಳಿ ಚಂದ್ರಶೇಖರ್) ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ; ಗೋಪಾಲಗಾಂಧಿ(ನಾಗೇಶ್) ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ; ತ್ರಿಬಲ್ ತಲಾಕ್(ಬ್ಯಾರಿ ಭಾಷೆ) ಅತ್ಯುತ್ತಮ ಪೋಷಕ ನಟ- ತಬಲಾ ನಾಣಿ (ಕೆಮೆಸ್ಟ್ರಿ ಆಫ್ ಕರಿಯಪ್ಪ) ಅತ್ಯುತ್ತಮ ಪೋಷಕ ನಟಿ- ಅನೂಷಾ ಕೃಷ್ಣ(ಬ್ರಾಹ್ಮಿ) ಅತ್ಯುತ್ತಮ ಕಥೆ- ಜಯಂತ್ ಕಾಯ್ಕಿಣಿ(ಇಲ್ಲಿರಲಾರೆ ಅಲ್ಲಿ ಹೋಗಲಾರೆ) ಅತ್ಯುತ್ತಮ ಚಿತ್ರಕಥೆ- ಡಾರ್ಲಿಂಗ್ ಕೃಷ್ಣ(ಲವ್ ಮಾಕ್ಟೇಲ್) ಅತ್ಯುತ್ತಮ ಸಂಭಾಷಣೆ- ಬರಗೂರು ರಾಮಚಂದ್ರಪ್ಪ(ಅಮೃತಮತಿ) ಅತ್ಯುತ್ತಮ ಛಾಯಾಗ್ರಹಣ: ಜಿ. ಎಸ್ ಭಾಸ್ಕರ್ (ಮೋಹನದಾಸ) ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ(ಯಜಮಾನ) ಅತ್ಯುತ್ತಮ ಸಂಕಲನ: ಶಿವು(ಝಾನ್ಸಿ ಐಪಿಎಸ್) ಅತ್ಯುತ್ತಮ ಬಾಲನಟ; ಮಾಸ್ಟರ್ ಪ್ರೀತಂ(ಮಿಂಚು ಹುಳ) ಅತ್ಯುತ್ತಮ ಬಾಲ ನಟಿ: ಬೇಬಿ ವೈಷ್ಣವಿ ಅಡಿಗ(ಸುಗಂಧಿ) ಅತ್ಯುತ್ತಮ ಕಲಾ ನಿರ್ದೇಶನ- ಹೊಸ್ಮನೆ ಮೂರ್ತಿ(ಮೋಸನದಾಸ) ಅತ್ಯುತ್ತಮ ಗೀತ ರಚನೆ – ರಝಾಕ್ ಪುತ್ತೂರು(ಪೆನ್ಸಿಲ್ ಬಾಕ್ಸ್) ತೀರ್ಪುಗಾರರ ವಿಶೇಷ ಪ್ರಶಸ್ತಿ- ಅಮೃತಮತಿ ಹಾಗೂ ತಮಟೆ ನರಸಿಂಹಯ್ಯ ಅತ್ಯುತ್ತಮ ನಿರ್ಮಾಣ ನಿರ್ವಹಣೆ- ಆರ್‌. ಗಂಗಾಧರ್ (ಮಕ್ಕಡ್ ಮನಸ್)

Related Articles

Back to top button